ನ್ಯೂಸ್

VIDEO: ಆಸ್ಟ್ರೇಲಿಯಾದ ಸಿಡ್ನಿ ಹಾರ್ಬರ್ ಸೇತುವೆ ಮೇಲೆ ಭರ್ಜರಿ ಹೊಸವರ್ಷಾಚರಣೆ; ಮುಗಿಲೆತ್ತರದಲ್ಲಿ ಸದ್ದು ಮಾಡಿದ ಪಟಾಕಿಗಳು

ಆಸ್ಟ್ರೇಲಿಯಾದ ಸಿಡ್ನಿ ಹಾರ್ಬರ್​ ಸೇತುವೆ ಮೇಲೆ ಹೊಸವರ್ಷ ಆಚರಣೆ ಭರ್ಜರಿಯಾಗಿ ನಡೆದಿದೆ. ಕತ್ತಲಿನ ಆಕಾಶದಲ್ಲಿ ಬಣ್ಣಬಣ್ಣದ ಪಟಾಕಿಗಳು ಸಿಡಿದವು.

ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಪ್ರಮಾಣ ಹೆಚ್ಚಾಗಿದ್ದರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಬೇಡಿ ಎಂದು ಜನರಿಗೆ ಕರೆ ನೀಡಲಾಗಿತ್ತು. ಆದರೆ ಅಲ್ಲಿನ ಪ್ರಧಾನಿ ಸ್ಕಾಟ್ ಮಾರಿಸನ್​ ಅವರು ಹೊಸವರ್ಷಾಚರಣೆ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದರು. ಜಗತ್ತಿಗೆ ನಾವು ಎಷ್ಟು ಆಶಾವಾದಿಗಳು, ಕ್ರಿಯಾತ್ಮಕವಾಗಿದ್ದೇವೆ ಎಂದು ತೋರಿಸಲು ಹೊಸವರ್ಷಾಚರಣೆಯೂ ಉತ್ತಮ ಮಾರ್ಗ ಎಂದು ಹೇಳಿದ್ದರಿಂದ ಜನರಲ್ಲೂ ಉತ್ಸಹ ಇಮ್ಮಡಿಯಾಗಿದೆ.

ಹಾರ್ಬರ್ ಸೇತುವೆ ಮೇಲಂತೂ ಮನಮೋಹಕ ಸಂಗೀತ, ಬಣ್ಣದೋಕುಳಿಯೊಂದಿಗೆ ಆಸ್ಟ್ರೇಲಿಯನ್ನರು ಹೊಸವರ್ಷವನ್ನು ಸ್ವಾಗತಿಸಿದರು.