ಮಮಿತಾ ಬೈಜು 
ನ್ಯೂಸ್

ಮಮಿತಾಗೆ ಡಬಲ್ ಧಮಾಕಾ: ‘ಜನನಾಯಗನ್’ ಬೆನ್ನಲ್ಲೇ ಆಗಸ್ಟ್‌ನಲ್ಲಿ ನಟಿಯ ಎರಡು ಸಿನಿಮಾಗಳು ತೆರೆಗೆ

ಪ್ರಮುಖ ಮುಖ್ಯಾಂಶಗಳು

  • ಕಾಲಿವುಡ್, ಮಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಮಮಿತಾ ಬೈಜು
  • ಜನನಾಯಗನ್​ ಚಿತ್ರದ ನಟಿಯ ಪಾತ್ರಕ್ಕೆ ಮೆಚ್ಚುಗೆ
  • ಆಗಸ್ಟ್​ನಲ್ಲಿ ನಟಿಯ ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್
ಮಲಯಾಳಂನ ‘ಪ್ರೇಮಲು’ ನಟಿ ಮಮಿತಾ ಬೈಜು ಸದ್ಯ ಮಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆಷ್ಟೇ (ಜುಲೈ 23) ರಿಲೀಸ್ ಆಗಿದ್ದ ತಮಿಳುನಾಡು ಸಿಎಂ ಜೋಸೆಫ್​ ವಿಜಯ್ ಅಭಿನಯದ ‘ಜನನಾಯಗನ್’ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾದರೂ, ಚಿತ್ರದಲ್ಲಿ ಮಮಿತಾ ಬೈಜು ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ನಟಿಯ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಮಧ್ಯೆಯೇ, ಮಮಿತಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು, ಸದ್ಯ ಅವರ ಎರಡು ಚಿತ್ರಗಳು ರೆಡಿಯಿದ್ದು, ಅವು ಆಗಸ್ಟ್‌ನಲ್ಲಿಯೇ ತೆರೆಗೆ ಬರುತ್ತಿರುವುದು ವಿಶೇಷ. ಹೌದು, ವಿಜಯ್ ಬಳಿಕ ಮಮಿತಾ ಮತ್ತೊಬ್ಬ ಕಾಲಿವುಡ್ ಹೀರೋ ಸೂರ್ಯ ಜತೆ ‘ವಿಶ್ವನಾಥ್ ಆ್ಯಂಡ್ ಸನ್ಸ್’ನಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ. ಕೆಲ ದಿನಗಳ ಹಿಂದೆ ಚಿತ್ರದ ಮದುವೆಯ ಮನೆಯ ವಿಡಿಯೋ ಸಾಂಗ್ ರಿಲೀಸ್ ಮಾಡಲಾಗಿದೆ. ಇನ್ನು ‘ವಿಶ್ವನಾಥ್ ಆ್ಯಂಡ್ ಸನ್ಸ್’ ರಿಲೀಸ್ ಆದ ಮರುವಾರ ಅಂದರೆ ಆ. 21ಕ್ಕೆ ಮಮಿತಾ ಅಭಿನಯದ ಮಲಯಾಳಂನ ‘ಬೆಥ್ಲೆಹೆಂ ಕುಡುಂಬ ಯೂನಿಟ್’ ಬಿಡುಗಡೆಯಾಗಲಿದೆ. ಈ ಮೂಲಕ ನಟಿಗೆ ಆಗಸ್ಟ್ ತಿಂಗಳು ಡಬಲ್ ಧಮಾಕಾ ಆಗಲಿದೆ. ಮಲಯಾಳಂನ ‘ಬೆಥ್ಲೆಹೆಂ ಕುಡುಂಬ ಯೂನಿಟ್’ನಲ್ಲಿ ‘ಪ್ರೇಮಂ’ ನಟ ನಿವಿನ್ ಪೌಲಿಗೆ ಮಮಿತಾ ಜೋಡಿಯಾಗಿದ್ದಾರೆ. ‘ಜನನಾಯಗನ್’ ಬಳಿಕ ನಟಿ ಈ ಎರಡು ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆಯಿಟ್ಟಿದ್ದಾರೆ. ಅಲ್ಲದೇ ಅವರು ‘ಇರಂದುವಾನಂ’ ಹಾಗೂ ಇನ್ನೂ ಹೆಸರಿಡದ ಮತ್ತೊಂದು ಮಲಯಾಳಂ ಚಿತ್ರದಲ್ಲೂ ನಟಿಸುತ್ತಿದ್ದಾರೆ. -ಏಜೆನ್ಸೀಸ್