ನ್ಯೂಸ್

ಆಗಸ್ಟ್​ 18ರಂದು ಬೆಂಗಳೂರಿನಲ್ಲಿ ‘ಯುಎಸ್‌ನಲ್ಲಿ ಅಧ್ಯಯನ’ ಮೇಳ ಆಯೋಜನೆ

ಮೋಹನ್​ ಶೆಟ್ಟಿ

ಚೆನ್ನೈ, ಆಗಸ್ಟ್ 12: ಯುಎಸ್ ಉನ್ನತ ಶಿಕ್ಷಣದ ಕುರಿತು ಯುಎಸ್ ಸರ್ಕಾರದ ಅಧಿಕೃತ ಮಾಹಿತಿಯ ಮೂಲವಾಗಿರುವ ಎಜುಕೇಷನ್​ , ದೇಶಾದ್ಯಂತ 8 ಶಿಕ್ಷಣ ಮೇಳಗಳ ಸರಣಿಯನ್ನು ಆಯೋಜಿಸಲಿದೆ. ಆ. 16ರಂದು ಹೈದರಾಬಾದ್‌ನಲ್ಲಿ ಪ್ರಾರಂಭವಾಗಿ ಆ. 25ರಂದು ನವದೆಹಲಿಯಲ್ಲಿ ಮುಕ್ತಾಯಗೊಳ್ಳಲಿದೆ. ಮೇಳವು ಬೆಂಗಳೂರಿನಲ್ಲಿ ಇದೇ ತಿಂಗಳ 18ರಂದು ಎಂಜಿ ರಸ್ತೆಯಲ್ಲಿರುವ ತಾಜ್ ಹೋಟೆಲ್‌ನಲ್ಲಿ ಮಧ್ಯಾಹ್ನ 2ರಿಂದ 5ರವರೆಗೆ ನಡೆಯಲಿದ್ದು, ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅಮೆರಿಕಾದಾದ್ಯಂತ 80ಕ್ಕೂ ಹೆಚ್ಚು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳನ್ನು ಭೇಟಿ ಮಾಡುವ ಅವಕಾಶ ಪಡೆಯಲಿದ್ದಾರೆ.

ಭಾಗವಹಿಸುವಿಕೆ ಯಾವುದೇ ಶುಲ್ಕವಿಲ್ಲ, ಆದರೆ ನೋಂದಣಿ ಅಗತ್ಯವಿದೆ.  ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ಈ ವೆಬ್​ಸೈಟ್​ ಅನ್ನು ಕ್ಲಿಕ್ ಮಾಡಿ ಮಾಹಿತಿ ಪಡೆಯಿರಿ. https://bit.ly/EdUSAFair24Emb ಈ ಮೇಳವು ಯುಎಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಬೃಹತ್ ಶ್ರೇಣಿಯ ಪ್ರತಿನಿಧಿಗಳನ್ನು ಭೇಟಿ ಮಾಡಲು ಮತ್ತು ಕಾಲೇಜು ಅರ್ಜಿ ಮತ್ತು ವೀಸಾ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಪ್ರವೇಶ, ವಿದ್ಯಾರ್ಥಿವೇತನಗಳು, ಕ್ಯಾಂಪಸ್ ಜೀವನ ಮತ್ತು ಯುಎಸ್ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೀರಿ. EducationUSA ಮೇಳಗಳ ವೇಳಾಪಟ್ಟಿ ಹೀಗಿದೆ:

  • ಶುಕ್ರವಾರ ಆಗಸ್ಟ್ 16 ಹೈದರಾಬಾದ್​ನ ಹೋಟೆಲ್ ಐಟಿಸಿ ಕೊಹೆನೂರ್​ನಲ್ಲಿ ಸಂಜೆ 04:30ರಿಂದ 09:00 ರವರೆಗೆ.
  • ಶನಿವಾರ, ಆಗಸ್ಟ್ 17: ಚೆನ್ನೈ ಹೋಟೆಲ್‌ ಹಿಲ್ಟನ್​ನಲ್ಲಿ ಮಧ್ಯಾಹ್ನ 02:00ರಿಂದ 05:00 ರವರೆಗೆ.
  • ಭಾನುವಾರ ಆಗಸ್ಟ್ 18: ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಹೋಟೆಲ್‌ ತಾಜ್​ನಲ್ಲಿ ಮಧ್ಯಾಹ್ನ 02:00ರಿಂದ 05:00 ರವರೆಗೆ.
  • ಸೋಮವಾರ, ಆಗಸ್ಟ್ 19: ಕೊಲ್ಕತ್ತಾದ ದಿ ಗ್ರ್ಯಾಂಡ್‌ ಒಬೆರಾಯ್‌ ಹೋಟೆಲ್, ಸಂಜೆ 07:00 ರಿಂದ 10:00 ರವರೆಗೆ.
  • ಬುಧವಾರ, ಆಗಸ್ಟ್ 21: ಅಹ್ಮದಾಬಾದ್, ಹೋಟೆಲ್ ಹಯಾತ್ ವಸ್ತ್ರಾಪುರ, ಸಂಜೆ 06:00ರಿಂದ 09:00 ರವರೆಗೆ.
  • ಗುರುವಾರ, ಆಗಸ್ಟ್ 22: ಪುಣೆ, ಹೋಟೆಲ್ ಶೆರಾಟನ್ ಗ್ರ್ಯಾಂಡ್ ಪುಣೆ ಬಂಡ್ ಗಾರ್ಡನ್, ಸಂಜೆ 06:00ರಿಂದ 09:00 ರವರೆಗೆ.
  • ಶನಿವಾರ, ಆಗಸ್ಟ್ 24: ಮುಂಬೈ, ಹೋಟೆಲ್ ಸೇಂಟ್ ರೆಜಿಸ್, ಮಧ್ಯಾಹ್ನ 02:00ರಿಂದ 05:00 ರವರೆಗೆ.
  • ಭಾನುವಾರ, ಆಗಸ್ಟ್ 25: ನವದೆಹಲಿ, ದಿ ಲಲಿತ್‌ ಹೋಟೆಲ್, ಮಧ್ಯಾಹ್ನ 02:00ರಿಂದ 05:00 ರವರೆಗೆ.

ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ವೆಬ್​ಸೈಟ್​ ಕ್ಲಿಕ್ ಮಾಡಿ: in.USEmbassy.gov/embassy-consulates/Chennai