ನ್ಯೂಸ್

ಚಿತ್ರ ವಿ-ಚಿತ್ರ: ಹರಾಜಿಗೆ ಬಂದ ಹಿಮಗಡ್ಡೆಯ ಚಿತ್ರ

ನವದೆಹಲಿ: ಬೃಹತ್ ಹಡಗು ಟೈಟಾನಿಕ್ ಮುಳುಗಿದ ಕಥೆ ಯಾರಿಗೆ ಗೊತ್ತಿಲ್ಲ? 2208 ಜನರನ್ನು ಹೊತ್ತು ನ್ಯೂಯಾರ್ಕ್​ನತ್ತ ಸಾಗುತ್ತಿದ್ದ ಟೈಟಾನಿಕ್ 1912ರ ಏಪ್ರಿಲ್ 15ರಂದು ಬೃಹತ್ ಹಿಮಗಡ್ಡೆಗೆ ಡಿಕ್ಕಿ ಹೊಡೆದು 700 ಜನ ಮೃತಪಟ್ಟಿದ್ದಲ್ಲದೆ ಹಡಗೂ ಮುಳುಗಿತ್ತು.

ಇತ್ತೀಚೆಗೆ ಪತ್ತೆಯಾದ ಆ ಹಿಮಗಡ್ಡೆಯ ಫೋಟೋ 15 ಸಾವಿರ ಡಾಲರ್​ಗೆ ಹರಾಜಾಗಿದೆ. ಟೈಟಾನಿಕ್ ಸಾಗುತ್ತಿದ್ದ ಮಾರ್ಗದಲ್ಲೇ ಎರಡು ದಿನಗಳ ಮೊದಲು ಸಾಗಿದ್ದ ಬೇರೆ ಹಡಗಿನ ಕ್ಯಾಪ್ಟನ್ ಡಬ್ಲ್ಯು. ವುಡ್ ಹಿಮಗಡ್ಡೆಯ ಫೋಟೋ ಸೆರೆಹಿಡಿದಿದ್ದರು.

ನ್ಯೂಯಾರ್ಕ್ ತಲುಪುವುದರೊಳಗೆ ಟೈಟಾನಿಕ್ ಮುಳುಗಿತ್ತು. ಅದೇ ದಾರಿಯಲ್ಲಿ ತಾನು ಕಂಡ ಹಿಮಗಡ್ಡೆಯೇ ದುರಂತಕ್ಕೆ ಕಾರಣ ಎಂದರಿತ ಅವರು; ತಾನು ಸಾಗಿದ ದಾರಿ, ದುರಂತಕ್ಕೆ ಕಾರಣವಾದ ಹಿಮಗಡ್ಡೆಯ ಬಗ್ಗೆ ತಮ್ಮ ಅಜ್ಜನಿಗೆ ಪತ್ರ ಬರೆದು ಫೋಟೋ ಕಳಿಸಿದ್ದರು. ಈಗ ಹರಾಜಿನಲ್ಲಿ ಆ ಪತ್ರ ಹಾಗೂ ಫೋಟೋವನ್ನು ಹೆನ್ರಿ ಆಲಿಡ್ಜ್ ಎಂಬಾತ ಖರೀದಿಸಿದ್ದಾರೆ.