ನ್ಯೂಸ್

ಸುರೇಶ್‌ಗೌಡ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಲೀಗಲ್ ನೋಟಿಸ್ ಕಳಿಸಿದ ಅಟ್ಟಿಕಾಬಾಬು!

ತುಮಕೂರು: ತಮ್ಮ ಕೊಲೆಗೆ ಸುಪಾರಿ ನೀಡಲಾಗಿದೆ ಎಂಬ ಮಾಜಿ ಶಾಸಕ ಸುರೇಶ್ ಗೌಡ ಆರೋಪಕ್ಕೆ ಸಂಬಂಧಿಸಿದಂತೆ ಸುರೇಶ್ ಗೌಡರ ವಿರುದ್ಧ ಉದ್ಯಮಿ ಅಟ್ಟಿಕಾ ಬಾಬು 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.

ಕೊಲೆಗೆ ಶಾಸಕ ಗೌರಿಶಂಕರ್ ಅವರು ಸುಪಾರಿ ನೀಡಿದ್ದಾರೆ ಎಂದು ಆರೋಪಿಸುವ ವೇಳೆ ಸುರೇಶ್‌ಗೌಡ ಅವರು ಹಿರೇಹಳ್ಳಿ ಮಹೇಶ್, ಅಟ್ಟಿಕಾ ಬಾಬು ಹೆಸರನ್ನೂ ಪ್ರಸ್ತಾಪಿಸಿದ್ದರು. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಅಟ್ಟಿಕಾ ಬಾಬು ಮೂರನೇ ಆರೋಪಿಯಾಗಿದ್ದಾರೆ.

‘‘ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಇನ್ನು 15 ದಿನಗಳ ಒಳಗೆ ಸುರೇಶ್ ಗೌಡ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನೂರು ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು’’ ಎಂದು ಅಟ್ಟಿಕಾಬಾಬು ಅವರು ಸುರೇಶ್‌ಗೌಡರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.