ನ್ಯೂಸ್

ಗಮನ ಸೆಳೆದ ಮಕ್ಕಳ ಹಬ್ಬ ವಿಶೇಷ ಕಾರ್ಯಕ್ರಮ

Haveri - Kariyappa Aralikatti

ರಾಣೆಬೆನ್ನೂರ: ಇಲ್ಲಿಯ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆ ವತಿಯಿಂದ ಮಕ್ಕಳ ಹಬ್ಬ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ ಗುರುವಾರ ಜರುಗಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಎರಡೂ ಮುಖ್ಯವಾಗಿವೆ ಎಂದರು.

ನಂತರ ಮಕ್ಕಳಿಗೆ ನೃತ್ಯ, ಚಿತ್ರಕಲೆ ಸೇರಿ ವಿವಿಧ ಸ್ಪರ್ಧೆಗಳು ನಡೆದವು. ಸಾಮೂಹಿಕ ನೃತ್ಯ ಪ್ರಾಥಮಿಕ ವಿಭಾಗದಲ್ಲಿ ಆರ್ಯಭಟ ಶಾಲೆ ಪ್ರಥಮ, ಪ್ರೌಢ ವಿಭಾಗದಲ್ಲಿ ಮಾತಾ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಪಡೆದವು. ಕಂಠಪಾಠ (ವಚನಗಳು) ಪ್ರಾಥಮಿಕ ವಿಭಾಗದಲ್ಲಿ ಎಚ್​ಪಿಎಸ್​ ನಂ.7 ಶಾಲೆಯ ವಿದ್ಯಾಥಿರ್ನಿ ಎಚ್​. ಶ್ರೀನಿಧಿ ಪ್ರಥಮ ಸ್ಥಾನ, ಚಿತ್ರಕಲೆಯ ಪ್ರಾಥಮಿಕ ವಿಭಾಗದಲ್ಲಿ ತುಮ್ಮಿನಕಟ್ಟಿ ಕೆಜಿಎಸ್​ ಶಾಲೆಯ ವಿದ್ಯಾಥಿರ್ನಿ ದೀಪಾ ಸೂರಹೊನ್ನಿ ಪ್ರಥಮ ಸ್ಥಾನ, ಪ್ರೌಢಶಾಲಾ ವಿಭಾಗದಲ್ಲಿ ರೋಟರಿ ಸ್ಕೂಲ್​ನ ವಿಜಯಲಕ್ಷಿ$್ಮ ಪ್ರಥಮ, ಛದ್ಮವೇಷ ಪ್ರಾಥಮಿಕ ವಿಭಾಗದಲ್ಲಿ ಕೋಣನತೆಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪವನ ಜಾಡರ ಪ್ರಥಮ, ಗಾಯನ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ದೇವಿಕಾ ಸ್ಕೂಲ್​ನ ಭೂಮಿಕಾ ಎಸ್​.ಕೆ. ಪ್ರಥಮ ಸ್ಥಾನ ಪಡೆದುಕೊಂಡರು. ಅವರಿಗೆ ಪ್ರಮಾಣಪತ್ರ ನೀಡಲಾಯಿತು.

ಪ್ರಮುಖರಾದ ಎಂ.ಎಚ್​. ಪಾಟೀಲ, ಶ್ರೀಧರ ಎನ್​., ಜಯಶ್ರೀ ಮುಡೆವೆಪ್ಪನವರ, ಸಿ.ವಿ. ಅಡಿವೇರ, ಎಚ್​.ಎಚ್​. ಜಾಡರ, ಚನ್ನಬಸಪ್ಪ, ಬಿ.ಎಚ್​. ಮಡ್ಲೂರ, ಶಂಭುನಾಥ ಕೊಟ್ಟರು, ಮಂಜುನಾಥ ಗೌಡಶಿವಣ್ಣನವರ ಮತ್ತಿತರರು ಉಪಸ್ಥಿತರಿದ್ದರು.