ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೆಜಿಎಫ್ ರಸ್ತೆಯ ಕಾಶೀಪುರ ವಲಯ ಅರಣ್ಯದಲ್ಲಿ ಸೋಮವಾರ ತಡರಾತ್ರಿ ಶ್ರೀಗಂಧದ ಮರ ಕಳವಿಗೆ ಯತ್ನಿಸುತ್ತಿದ್ದವರನ್ನು ಬಂಽಸಲು ತೆರಳಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆಗೆ ಹಲ್ಲೆಗೆ ಯತ್ನಿಸಿದ ಪರಿಣಾಮ ಆರೋಪಿ ಕಾಲಿಗೆ ಗುಂಡು ಹಾರಿಸಿ ಒಬ್ಬನನ್ನು ಬಂಧಿಸಲಾಗಿದ್ದು, ಐವರು ಆರೋಪಿಗಳು ಪರಾರಿಯಾಗಿದ್ದಾರೆ.
ತಾಲೂಕಿನ ತಾಯಲೂರು ಗ್ರಾಮದ ಗುರಾಲುವಂಕಕ್ಕೆ ಸಂಬಂಧಿಸಿದ ಭತ್ತೆಪ್ಪ (26) ಬಂಧಿತ. ಸೀನ, ರವಿ, ಸುರೇಶ, ಸೀನ, ಮಹೇಂದ್ರ ಎಂಬುವರು ತಲೆಮರೆಸಿಕೊಂಡಿದ್ದಾರೆ.
ಗಾಯಾಳು ಭತ್ತೆಪ್ಪನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನಂತರ ಕೋಲಾರ ಎಸ್‌ಎನ್‌ಆರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಶೀಪುರ ಅರಣ್ಯ ಪ್ರದೇಶದಲ್ಲಿ ಕೆಲ ಹಿಂದಿನ ದಿನಗಳಿಂದ ಶ್ರೀಗಂಧದ ಮರಗಳು ಕಳವು ಆಗುತ್ತಿದ್ದವು, ಇಲಾಖೆಯ ಅಽಕಾರಿಗಳು ರಾತ್ರಿ ವೇಳೆ ಗಸ್ತು ಬಿಗಿ ಹೆಚ್ಚಸಿದ್ದರು. ಸೋಮವಾರ ತಡರಾತ್ರಿ 6 ಮಂದಿ ಶ್ರೀಗಂಧ ಮರಗಳನ್ನು ಕಡಿಯುತ್ತಿರುವುದು ತಿಳಿದು ಗಸ್ತು ಅರಣ್ಯ ಪಾಲಕ ಅನಿಲ್, ಸಿದ್ದರಾಮ ಪರೀಟ ಅವರು ಸ್ಥಳಕ್ಕೆ ಹೋದಾಗ ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಆಗ ಗಸ್ತು ಅರಣ್ಯ ಪಾಲಕ ಅನಿಲ್ ಸಿದ್ದರಾಮ ಪರೀಟ ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದರೂ ಲೆಕ್ಕಿಸದೆ ಹಲ್ಲೆ ಮಾಡಲು ಮುಂದಾಗಿದ್ದಾಗ ಭತ್ತೆಪ್ಪ ಮೇಲೆ ಗುಂಡು ಹಾರಿಸಿದ್ದಾರೆ. ತಕ್ಷಣ ಉಳಿದ ಐವರು ಆರೋಪಿಗಳು ಕತ್ತಲಲ್ಲಿ ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಹಾಗೂ ಅಽಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಆಯುಧಗಳ ವಶ: ಕಿಡಿಗೇಡಿಗಳು ಶ್ರೀಗಂಧದ ಮರಗಳನ್ನು ಕಳವು ಮಾಡಲು ಬಳಕೆ ಮಾಡಲಾದ ೩ರಂಪಗಳು, ಗಡಾರಿ, ಮಚ್ಚು ಹಾಗೂ 2 ಬ್ಯಾಟರಿ ವಶಕ್ಕೆ ಪಡೆಯಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸಿ.ಎಸ್.ಜ್ಯೋತಿ ಮಾಹಿತಿ ನೀಡಿದರು.