ಸಕಲೇಶಪುರ: ಪಟ್ಟಣದ ಖಾಸಗಿ ಕಾಲೇಜಿನ ಪ್ರಾಂಶುಪಾಲರೊಬ್ಬರನ್ನು ಹನಿಟ್ರಾೃಪ್ ಹೆಸರಿನಲ್ಲಿ ವಂಚಿಸುವ ಯತ್ನ ನಡೆದಿದೆ.
ಕೆಲವು ದಿನಗಳ ಹಿಂದೆ ‘ಮಾಡೆಲ್ ಕೆಎ-13‘ ಎಂಬ ನಕಲಿ ಇನಸ್ಟಾಗ್ರಾಮ್ ಖಾತೆಯಿಂದ ಕರೆ ಮಾಡುತ್ತಿದ್ದ ಗುಂಪೂಂದು ತಮ್ಮ ಖಾಸಗಿ ವಿಡಿಯೋ ತಮ್ಮ ಬಳಿ ಇದ್ದು ಈ ವಿಡಿಯೋವನ್ನು ಆಳಿಸಲು ಒಂದು ಲಕ್ಷ ರೂ. ನೀಡಬೇಕು ತಪ್ಪಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡುವುದಾಗಿ ಗುಂಪೊಂದು ಬೆದರಿಸಿದೆ. ಕಾಲೇಜಿನ ವಿದ್ಯಾರ್ಥಿಗಳಿಂದಲೂ ಖಾಸಗಿ ವಿಡಿಯೋ ವೀಕ್ಷಿಸಿರುವುದಾಗಿ ಪ್ರಾಂಶುಪಾಲರಿಗೆ ಹೇಳಿಸುವ ಮೂಲಕ ಒತ್ತಡ ತಂದಿದ್ದಾರೆ. ನಿರಂತರ ಬೆದರಿಕೆಯಿಂದ ಬೇಸತ್ತ ಪ್ರಾಂಶುಪಾಲರು ಪಟ್ಟಣ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಶ್ರವಣಬೆಳಗೂಳ ಮೂಲದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರಿಂದ ಬೆದರಿರುವ ಇನ್ನುಳಿದವರು ವಿಡಿಯೋ ಡಿಲೀಟ್ ಮಾಡಿರುವುದಾಗಿ ಹೊಸದಾಗಿ ಆಡಿಯೋ ಬಿಡುಗಡೆ ಮಾಡುವ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.