Vijay : ಮಧುರೈನಲ್ಲಿ ಆಗಸ್ಟ್ 21 ರಂದು ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕಾರ್ಯಕ್ರಮವೊಂದರಲ್ಲಿ ವಿಜಯ್ ಅವರ ಭದ್ರತಾ ಸಿಬ್ಬಂದಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾರ್ಯಕರ್ತ ಶರತ್ಕುಮಾರ್ ಅವರು ತಮಿಳುನಾಡಿನ ಕುನ್ನಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಅವರಿಬ್ಬರನ್ನು ನಂಬಿ ಕೆಟ್ಟೆ… ಶಾರುಖ್, ದೀಪಿಕಾ ವಿರುದ್ಧ ದೂರು ದಾಖಲಿಸಿದ ರಾಜಸ್ಥಾನ ವ್ಯಕ್ತಿ! Deepika Padukone, SRK
ಪೊಲೀಸರ ಪ್ರಕಾರ, ಕಾರ್ಯಕರ್ತ ರ‍್ಯಾಂಪ್ ಏರಲು ಪ್ರಯತ್ನಿಸಿದ್ದು, ಆ ವೇಳೆ ವಿಜಯ್ ಅವರ ಭದ್ರತಾ ಸಿಬ್ಬಂದಿಗಳು ಬಲವಂತವಾಗಿ ತಳ್ಳಿದ ಕಾರಣ ಮೇಲಿನಿಂದ ಬಿದ್ದು, ಎದೆಗೆ ಬಲವಾದ ಗಾಯವಾಗಿದೆ ಎಂದು ಶರತ್ಕುಮಾರ್ ದೂರು ಸಲ್ಲಿಸಿದ್ದಾರೆ ದೂರು ನೀಡಿದ್ದಾರೆ.
ಕಾರ್ಯಕರ್ತ ಶರತ್ಕುಮಾರ್ ದೂರಿನ ಮೇರೆಗೆ ಆಗಸ್ಟ್ 26 ರಂದು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಭದ್ರತಾ ಸಿಬ್ಬಂದಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಮೂರು ವಿಭಾಗಗಳ ಅಡಿಯಲ್ಲಿ ಕುನ್ನಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
1.5 ಲಕ್ಷಕ್ಕೂ ಹೆಚ್ಚು ಆಸನ ಹೊಂದಿದ ಈ ಸಭೆಯಲ್ಲಿ ವಿಜಯ್ನನ್ನು ಕಾಣಲು ಬೆಳಿಗ್ಗೆಯಿಂದಲೇ ಜನಸಮೂಹ ಸೇರಿತ್ತು. ಈ ವೇಳೆ ಸಾವಿರಾರು ಜನರಿಂದ ಹರ್ಷೊದ್ಗಾರ ಸ್ವೀಕರಿಸಿದ ವಿಜಯ್, ಟಿವಿಕೆ ರಾಜಕೀಯ ಆಟವಲ್ಲ. ಇದು ಒಂದು ಸಿದ್ದಾಂತ. ಪ್ರಚಾರಕ್ಕಾಗಿ ಮಾಡುವ ಭಾಷಣವಲ್ಲ . ಟಿವಿಕೆ ಪ್ರಾಬಲ್ಯ ಸಾಧಿಸಲು ಕೋಟ್ಯಾಂತರ ಜನ ನಮ್ಮೊಂದಿಗೆ ಇದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅವರಿಬ್ಬರನ್ನು ನಂಬಿ ಕೆಟ್ಟೆ… ಶಾರುಖ್, ದೀಪಿಕಾ ವಿರುದ್ಧ ದೂರು ದಾಖಲಿಸಿದ ರಾಜಸ್ಥಾನ ವ್ಯಕ್ತಿ! Deepika Padukone, SRK
ವಿಜಯ್ನನ್ನು ಗಮನ ಸೆಳೆಯಲು ಅಭಿಮಾನಿಯೊಬ್ಬ ಅಪಾಯಕಾರಿ ಕಂಬಿಗೆ ನೇತಾಡುತ್ತಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಈತ ವಿಜಯ್ ಜನಸಂದಣಿಯ ಮೂಲಕ ಚಲಿಸುತ್ತಿರುವಾಗ ಪುಸ್ತಕ ನೀಡಲು ಕಂಬಿಯಲ್ಲಿ ನೇತಾಡುತ್ತಿದ್ದ, ಈ ವೇಳೆ ವಿಜಯ್ ಸುರಕ್ಷಿತವಾಗಿ ಆತನಿಂದ ಪುಸ್ತಕ ಸ್ವೀಕರಿಸಿ ಮುಂದಕ್ಕೆ ಚಲಿಸಿದರು. (ಏಜೆನ್ಸೀಸ್)