ನ್ಯೂಸ್

ಸ್ಪಾ ಮೇಲೆ ದಾಳಿ ಇಬ್ಬರು ಯುವತಿಯರ ರಕ್ಷಣೆ

ಮೈಸೂರು: ಸ್ಪಾ ಮೇಲೆ ದಾಳಿ ನಡೆಸಿರುವ ಎನ್‌ಆರ್ ಠಾಣಾ ಪೊಲೀಸರು ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದು, ಮೂವರು ಮಹಿಳೆಯರು ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ನಗರದ ಹಳೆಕೆಸರೆಯ ಗಂಗಾನಗರದ ಬಳಿ ಇರುವ ರೆಸಾರ್ಟ್‌ನಲ್ಲಿರುವ ಸ್ಪಾ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆಗಿನ ಮಾಹಿತಿ ಒಡನಾಡಿಯ ನಿರ್ದೇಶಕರಾದ ಸ್ಟ್ಯಾನ್ಲಿ ಹಾಗೂ ಪರಶುರವರಿಗೆ ದೊರಕಿದೆ. ಈ ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.