ನ್ಯೂಸ್

ಕರ್ನಾಟಕದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇ.25.7 ಪಾಲು ಗಳಿಸಿದ ಏಥರ್ ಎನರ್ಜಿ

ಬೆಂಗಳೂರು: ಏಥರ್ ಎನರ್ಜಿ ಕರ್ನಾಟಕದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯ ನಾಯಕನಾಗಿ ಹೊರಹೊಮ್ಮಿದ್ದು, 2024ರ ಡಿಸೆಂಬರ್ ತಿಂಗಳಲ್ಲಿ ಕರ್ನಾಟಕದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯ ಶೇ.25.7ರಷ್ಟು ಪಾಲು ಗಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಕಂಪನಿಯು 2,279 ಯುನಿಟ್ ಗಳನ್ನು ವಿತರಣೆ ಮಾಡಿದ್ದು, ಭಾರತದ ಅತ್ಯಂತ ಮಹತ್ವದ ಇವಿ ಮಾರುಕಟ್ಟೆಗಳಲ್ಲಿ ಒಂದಾದ ಕರ್ನಾಟಕದಲ್ಲಿ ಪ್ರಾಬಲ್ಯವನ್ನು ಸಾಧಿಸಿದೆ.

ಕರ್ನಾಟಕದಲ್ಲಿ ಕಂಪನಿಯು ಸಾಧಿಸಿರುವ ಈ ಯಶಸ್ಸು ಮಹತ್ವದ ಮೈಲಿಗಲ್ಲಾಗಿದೆ. ರಾಜ್ಯದಲ್ಲಿ ಮಾರಾಟವಾಗುವ ನಾಲ್ಕು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಒಂದು ಏಥರ್ ಎಲೆಕ್ಟ್ರಿಕ್ ಸ್ಕೂಟರ್ ಆಗಿರುತ್ತದೆ. ಈ ಸಾಧನೆಯು 2024ರಲ್ಲಿ ಸಂಸ್ಥೆಯು ಸಾಧಿಸಿರುವ ಸ್ಥಿರ ಬೆಳವಣಿಗೆಗೆ ಸಾಕ್ಷಿಯಾಗಿದೆ.

ತಯಾರಕ ಸಂಸ್ಥೆ ಮಾರಾಟವಾದ ಯುನಿಟ್ ಗಳು ಮಾರುಕಟ್ಟೆ ಪಾಲು

ಏಥರ್ ಎನರ್ಜಿ 2,279, 25.7% ಇತರರು 2,140, 24.1% ಓಲಾ 1,661, 18.7% ಟಿ.ವಿ.ಎಸ್ 1,623, 18.3% ಬಜಾಜ್ 884, 10.0% ಆಂಪಿಯರ್ 177, 2.0% ವಿಡಾ 92, 1.0% ಓಕಿನಾವ 22, 0.2% ಹೀರೋ ಎಲೆಕ್ಟ್ರಿಕ್ 1, 0.0% ಒಟ್ಟು 8,879, 100.0%

ದಕ್ಷಿಣ ಭಾರತದಲ್ಲಿ ಸಂಸ್ಥೆಯು ತ್ರೈಮಾಸಿಕವಾರು ಗಳಿಸಿದ ಮಾರುಕಟ್ಟೆ ಪಾಲು ಬೆಳವಣಿಗೆ ವಿವರ

  • ತ್ರೈಮಾಸಿ ಏಥರ್ ಎನರ್ಜಿಯ ಮಾರುಕಟ್ಟೆ ಪಾಲು 2024ರ ಎರಡನೇ ತ್ರೈಮಾಸಿಕ (ಏಪ್ರಿಲ್- ಜೂನ್) 13.6% 2024ರ ಮೂರನೇ ತ್ರೈಮಾಸಿಕ (ಜುಲೈ- ಸೆಪ್ಟೆಂಬರ್) 19.5% 2024ರ ನಾಲ್ಕನೇ ತ್ರೈಮಾಸಿಕ (ಅಕ್ಟೋಬರ್- ಡಿಸೆಂಬರ್) 21.7%