ಕಂಪ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾ ಮಠದಲ್ಲಿ ರಾಯರ ಬೃಂದಾವನವನ್ನು ತುಳಸಿ, ಪುಷ್ಪಮಾಲೆ, ಬೆಳ್ಳಿ ಕವಚಗಳಿಂದ ಅಲಂಕರಿಸಲಾಗಿತ್ತು. 
ನ್ಯೂಸ್

ರಾಯರ ಮಠದಲ್ಲಿ ವಿಶೇಷ ಪೂಜೆ

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯಲ್ಲಿನ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾ ಮಠದ ಐದನೇ ವಾರ್ಷಿಕೋತ್ಸವ ನಿಮಿತ್ತ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿದವು.

ಪುರೋಹಿತ ಕಿಶೋರಾಚಾರ್ ಪೌರೋಹಿತ್ಯದಲ್ಲಿ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪ್ರಾಂಗಣದಲ್ಲಿ ರಥೋತ್ಸವ, ತೀರ್ಥ ಪ್ರಸಾದ ವಿನಿಯೋಗ, ಬ್ರಾಹ್ಮಣ ಸುವಾಸಿನಿಯರು ಮತ್ತು ಮಕ್ಕಳಿಂದ ರಾಯರ ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ವಾರ್ಷಿಕೋತ್ಸವ ಅಂಗವಾಗಿ ರಾಯರ ಬೃಂದಾವನವನ್ನು ತುಳಸಿ, ಪುಷ್ಪಮಾಲೆ, ಬೆಳ್ಳಿಯ ಕವಚಗಳಿಂದ ಅಲಂಕರಿಸಲಾಗಿತ್ತು. ವ್ಯವಸ್ಥಾಪಕ ಪುರುಷೋತ್ತಮಾಚಾರ್, ವಿಚಾರಣಾಕರ್ತ ಟಿ.ಕೊಟ್ರೇಶ್ ಇತರರಿದ್ದರು.