ನ್ಯೂಸ್

ಭೀಕರ Car ಅಪಘಾತ; 66 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

ನವದೆಹಲಿ: ದಕ್ಷಿಣ ಇಥಿಯೋಪಿಯಾದಲ್ಲಿ ಸಂಭವಿಸಿದ ಭೀಕರ ಕಾರು (Car) ಅಪಘಾತದಲ್ಲಿ 66ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಿದಾಮಾ ಆರೋಗ್ಯ ಬ್ಯೂರೋ, ಕಾರು ಅಪಘಾತ ಒಂದರಲ್ಲಿ 66 ಮಂದಿ ಮೃತಪಟ್ಟಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೋನಾ ಜನರಲ್ ಹಾಸ್ಪಿಟಲ್​​ಗೆ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಇಥಿಯೋಪಿಯಾದ ಪೂರ್ವ ವಲಯದ ಗೆಲಾನಾ ಸೇತುವೆಯಲ್ಲಿ ಈ ದುರಂತ ಸಂಭವಿಸಿದ್ದು, ನೀರಿನಲ್ಲಿ ಮುಳುಗಿರುವ ಕಾರು ಹಾಗೂ ಜನರನ್ನು ಅಧಿಕಾರಿಗಳು ಹೊರತೆಗೆದಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಅಪಘಾತ ಹೇಗೆ ಸಂಭವಿಸಿತ್ತು ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.

ಒಂದು ಕಾರು ಅಪಘಾತದಿಂದ 66 ಮಂದಿ ಹೇಗೆ ಮೃತಪಟ್ಟಿದ್ದಾರೆ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಅಲ್ಲಿನ ಸರ್ಕಾರ ಅಥವಾ ಅಧಿಕಾರಿಗಳು ಅಪಘಾತದ ಬಗ್ಗೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ.