ನ್ಯೂಸ್

ಮದುವೆಗೆ ಹೊರಟಿದ್ದ ಬಸ್ಸು ನದಿಯ ಪಾಲು: ಒಂದೇ ಕುಟುಂಬದ 24 ಜನರ ದುರ್ಮರಣ

ಬೂಂಡಿ: ಮದುವೆಗೆಂದು ಹೊರಟಿದ್ದ ಬಸ್ಸು ನದಿಗೆ ಬಿದ್ದಿದ್ದು, ಒಂದೇ ಕುಟುಂಬದ 24 ಜನರು ದುರ್ಮರಣ ಹೊಂದಿರುವ ಘಟನೆ ರಾಜಸ್ಥಾನದ ಬೂಂಡಿಯಲ್ಲಿ ನಡೆದಿದೆ.

ಇಂದು ಮದುವೆಯಿದ್ದ ಕಾರಣ ವರನ ಕಡೆಯವರು ಬಸ್ಸಿನಲ್ಲಿ ಹೊರಟಿದ್ದರು. 40 ಜನರಿದ್ದ ಬಸ್ಸು ಬೂಂಡಿಯ ಪಾಪ್ಡಿಗಾಂವ್​ ಬಳಿ ಬ್ರಿಡ್ಜ್​ನಿಂದ ಆಯ ತಪ್ಪಿ ನದಿಯೊಳಗೆ ಬಿದ್ದಿದೆ. ಇದುವರೆಗೆ ಸುಮಾರು 24 ಜನರು ಮೃತರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ನದಿಯಲ್ಲಿರುವ ಬಸ್ಸಿನಿಂದ ಮೃತ ದೇಹಗಳನ್ನು ಹೊರೆತೆಗೆಯಲಾಗುತ್ತಿದೆ. (ಏಜೆನ್ಸೀಸ್​)