ರಾಣೆಬೆನ್ನೂರ: ಜಿಲ್ಲೆಯಲ್ಲಿಯೇ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ರೈತರ ಜೀವನಾಡಿಯಾಗಿರುವ ಅಸುಂಡಿ ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಅವರೊಂದಿಗೆ ಚಚಿರ್ಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಸುಂಡಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಭಾನುವಾರ ಬೆಂಗಳೂರಿನಿಂದ ಬೆಳಗಾವಿಗೆ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಸಮಯದಲ್ಲಿ ತಾಲೂಕಿನ ಅಸುಂಡಿ ಗ್ರಾಮದ ದೊಡ್ಡಕೆರೆ ವಿಸಿದ ಅವರು, ರಾಜ್ಯದಲ್ಲಿನ ಕೆರೆಗಳನ್ನು ನದಿಗಳ ಮೂಲಕ ಭತಿರ್ ಮಾಡಿ ಬರ ಮುಕ್ತಗೊಳಿಸಲು ಸಾಧ್ಯ ಎಂಬುದನ್ನು ಅಧ್ಯಯ ಮಾಡಿದ್ದೇವೆ. ಅಸುಂಡಿ ಕೆರೆಯು 450 ಎಕರೆ ವಿಸ್ತೀರ್ಣ ಹೊಂದಿದ್ದು, ಅಸುಂಡಿ ನಾಲಾ ಜಲಾನಯನ ವ್ಯಾಪ್ತಿಯ 20ಕ್ಕೂ ಅಧಿಕ ಗ್ರಾಮಗಳ ರೈತರ ಲಕ್ಷಾಂತರ ಎಕರೆ ಜಮೀನಿಗೆ ನೀರುಣ್ಣಿಸಲು ಕೆರೆಯನ್ನು ಅಭಿವೃದ್ಧಿಪಡಿಸಲು ರೈತರು ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಬಸವರಾಜ ಶಿವಣ್ಣನವರ, ಸಣ್ಣತಮ್ಮಪ್ಪ ಬಾಕಿರ್, ಬಸವಣ್ಣೆಪ್ಪ ಪಾರ್ವತೇರ, ಪರಶುರಾಮ ಜಂಗಳಿ, ಹನುಮಂತಪ್ಪ ಅಳಲಗೇರಿ, ಮಾಲತೇಶ ಬೂದಿಹಾಳ ಮತ್ತಿತರರು ಇದ್ದರು.