ನ್ಯೂಸ್

ಅಸ್ಟ್ರೋನೋಮರ್​ ಸಿಇಒ ಆಂಡಿ ಬೈರನ್ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಸಹೋದ್ಯೋಗಿ: ವಿಡಿಯೋ ವೈರಲ್​... Andy Byron

Andy Byron : ಕೋಲ್ಡ್​ ಪ್ಲೇ ಸಂಗೀತ ಕಚೇರಿಯಲ್ಲಿ ಅಸ್ತ್ರೋನೋಮರ್​ ಕಂಪನಿ ಸಿಇಒ ಆಂಡಿ ಬೈರನ್ ಹಾಗು ಸಹೋದ್ಯೋಗಿ ಭಾಗಿಯಾಗಿದ್ದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಮೇಗನ್​ ಕರ್ರಿಗನ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬೈರನ್ ಉಪನಾಮವನ್ನು ತೆಗೆದು ಹಾಕಿದ್ದಾರೆ. ಈ ವಿವಾದದ ಬಗ್ಗೆ ದಂಪತಿ ನೇರವಾಗಿ ಮಾತನಾಡದಿದ್ದರೂ ಪರೋಕ್ಷವಾಗಿ ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿದೆ ಎಂದು ಸುದ್ದಿಯಾಗುತ್ತಿದೆ.

ಮೇಗನ್​ ಕರ್ರಿಗನ್ ಅವರು​ ತಮ್ಮ ಫೇಸ್​ಬುಕ್​​ ಖಾತೆಯಿಂದ ತನ್ನ ಪತಿಯ (ಬೈರನ್) ಉಪನಾಮವನ್ನು ತೆಗೆದುಹಾಕಿರುವುದು ಅನೇಕ ಚರ್ಚೆಗಳಿಗೆ ಆಹ್ವಾನ ನೀಡಿದಂತಿದೆ. ಇವರ ಮೌನವೇ ಇವರ ದಾಂಪತ್ಯದ ಬಗ್ಗೆ ತಿಳಿಸುತ್ತದೆ ಎಂದು @anuibi ಹೆಸರಿನ ಎಕ್ಸ್​ ಬಳಕೆದಾರ ಬರೆದುಕೊಂಡಿದ್ದು, ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ಫಾಕ್ಸ್‌ ಬರೋದ ಜಿಲೆಟ್ ಕ್ರೀಡಾಂಗಣದಲ್ಲಿ ಕೋಲ್ಡ್‌ಪ್ಲೇ ಪ್ರದರ್ಶನದ ವೇಳೆ ಅಸ್ಟ್ರೋನೋಮರ್​ ಸಿಇಒ ಆಂಡಿ ಬೈರನ್ ಕ್ರಿಸ್ಟಿನ್ ಕ್ಯಾಬಟ್ ಜೊತೆಗೆ ಆತ್ಮೀಯ ಕ್ಷಣವನ್ನು ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್​ ಆಗಿದೆ. ಕಾರ್ಯಕ್ರಮದ ವೇಳೆ ವಿಡಿಯೋ ರೆಕಾರ್ಡ್​ ಮಾಡುತ್ತಿರುವುದ ಅವರಿಬ್ಬರ ಅರಿವಿಗೆ ಬರಲಿಲ್ಲ. ಆದರೆ, ರೆಕಾರ್ಡ್​ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ಮುಖ ಮರೆಮಾಚಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಅವರ ಆಪ್ತ ಕ್ಷಣಗಳು ರೆಕಾರ್ಡ್​ ಆಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೇಗನ್​​ ಕರ್ರಿಗನ್ ಯಾರು?

ಮೇಗನ್​ ಮ್ಯಾಸಚೂಸೆಟ್ಸ್​ನ ಗೌರವಾನ್ವಿತ ಶಿಕ್ಷಕಿ. ಅವರು ಬ್ಯಾಂಕ್ರಾಫ್ಟ್ ಶಾಲೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ಎರಡು ಮಕ್ಕಳನ್ನು ಹೊಂದಿದ್ದಾರೆ.