ಹೈದರಾಬಾದ್ : ತೆಲುಗಿನ ಗೀತಾ ಗೋವಿಂದಂ ಸಿನಿಮಾ ಮೂಲಕ ವಿಜಯ್ ದೇವರಕೊಂಡ, ಕನ್ನಡದ ನಟಿ ರಶ್ಮಿಕ ಜೋಡಿ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ಇಬ್ಬರ ಗೆಳೆತನ ಬೆಳೆದಿದೆ. ಅವಕಾಶ ಸಿಕ್ಕಾಗಲೆಲ್ಲಾ ಪ್ರವಾಸ ಮಾಡುತ್ತಾ ಮೋಜು ಮಾಡುತ್ತಿದ್ದರು. ಇದರಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ರಹಸ್ಯ ಸಂಬಂಧದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿತ್ತು.
ತದನಂತರ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ಪ್ರೀತಿಸುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಪ್ರಶ್ನೆ ಬಂದಾಗಲೆಲ್ಲ ನಾವಿಬ್ಬರೂ ಫ್ರೆಂಡ್ಸ್ ಅಂತ ಹೇಳುತ್ತಲೇ ಬಂದಿದ್ದಾರೆ. ಆದರೆ ಈಗ ಈ ಜೋಡಿ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ಜ್ಯೋತಿಷಿ ವೇಣು ಸ್ವಾಮಿ ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವೇಣು ಸ್ವಾಮಿ ಹೇಳಿದ್ದೇನು ?: ನಟ ವಿಜಯ್ ದೇವರಕೊಂಡ, ರಶ್ಮಿಕಾ ಅವರು ಮದುವೆ ಮಾಡಿಕೊಳ್ಳಲಿದ್ದಾರೆ. ಅವರು ಗೀತಾ ಗೋವಿಂದಂ ಸಿನಿಮಾದಿಂದ ಅವರು ಪ್ರೀತಿಯಲ್ಲಿ ಇದ್ದಾರೆ. ಮದುವೆ ಕೂಡ ಆಗುತ್ತಾರೆ. ಮದುವೆ ನಂತರ ದೂರವಾಗಲಿದ್ದಾರೆ. ಈ ಕುರಿತು ಆರು ತಿಂಗಳ ಹಿಂದೆಯೇ ನಟಿ ರಶ್ಮಿಕಾ ಅವರಿಗೆ ಹೇಳಿದ್ದೇನೆ. ಇದರಿಂದಲೇ ಆಕೆಗೂ ನನಗೂ ಮನಸ್ತಾಪವಾಗಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.
ನಟ ವಿಜಯ್ ದೇವರಕೊಂಡ, ರಶ್ಮಿಕಾ ಅವರು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಈ ಜೋಡಿ ಪ್ರತಿಕ್ರಿಯೆ ನೀಡಿಲ್ಲ. ಕುಟುಂಬಸ್ಥರು ಕೂಡ ಮಾಹಿತಿ ನೀಡಿಲ್ಲ. ಇವರಿಬ್ಬರು ಈ ವರ್ಷ ಒಟ್ಟಿಗೆ ದೀಪಾವಳಿ ಆಚರಿಸಿದ್ದರು ಎನ್ನಲಾಗಿತ್ತು. ಅನಿಮಲ್ ಸಿನಿಮಾ ಪ್ರಚಾರವೊಂದರ ಸಮಯದಲ್ಲಿ ರಶ್ಮಿಕಾ ಅವರ ಫೋನ್ ಕಾಲ್‌ಗೆ ವಿಜಯ್ ಉತ್ತರಿಸಿದ ರೀತಿ ನೋಡಿ ಅಭಿಮಾನಿಗಳಿಗೂ ಕೂಡ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದರು.
ಅನಿಮಲ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ನಟನೆಯ ಪುಷ್ಪ 2: ದಿ ರೂಲ್ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.