ಮಡಿಕೇರಿ:
ಸುಶಿಕ್ಷಿತರ ಜಿಲ್ಲೆ ಹೆಗ್ಗಳಿಕೆಯ ಕೊಡಗು ಕೂಡ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಹೊರತಾಗಿಲ್ಲ. ಕಳೆದ ಮೂರು ವರ್ಷಗಳ ಸರ್ಕಾರಿ ದಾಖಲೆ ಗಮನಿಸಿದರೆ ಲೈಂಗಿಕ ದೌರ್ಜನ್ಯಕ್ಕೆ ಸಂಬAಧಿಸಿದ ಪ್ರಕರಣಗಳು ಹೆಚ್ಚಾಗುತ್ತಲೇ ಬಂದಿದೆ. ಪತಿಯಿಂದ ಪತ್ನಿ ಮೇಲಿನ ಸಾಕಷ್ಟು ಹಲ್ಲೆ ಪ್ರಕರಣಗಳು, ವರದಕ್ಷಿಣೆ ಕಿರುಕುಳ ಪ್ರಕರಣಗಳೂ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಕಳೆದ ಮೂರು ವರ್ಷಗಳಲ್ಲಿ 15 ಅತ್ಯಾಚಾರ ಪ್ರಕರಣಗಳೂ ಇಲ್ಲಿ ವರದಿ ಆಗಿದೆ.
ಸರ್ಕಾರದ ಕಾನೂನುಗಳು, ಜಾಗೃತಿ ಕಾರ್ಯಕ್ರಮಗಳು, ಹೆಚ್ಚಿನ ವಿದ್ಯಾಭ್ಯಾಸ ಏನೇ ಇದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಪ್ರತಿ ದಿನವೂ ಕನಿಷ್ಠ ಒಂದಾದರೂ ಒಂದಿಲ್ಲ ಒಂದು ರೀತಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವುದಕ್ಕೆ ಸಂಬAಧಿಸಿದ ಸುದ್ದಿ ಇಲ್ಲದ ಮಾಧ್ಯಮಗಳ ವರದಿ ಕಾಣುವುದಕ್ಕೆ ಸಾಧ್ಯವಿರದ ಸ್ಥಿತಿ ನಿರ್ಮಾಣ ಆಗಿದೆ. ಆಧುನಿಕ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಸಾಕ್ಷಿ ಆಗುತ್ತಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಸಮಾಜದ ದೊಡ್ಡ ಪಿಡುಗಾಗಿ ಇನ್ನೂ ಮುಂದುವರಿದುಕೊAಡು ಬಂದಿದೆ.
ಸಾಮಾನ್ಯ ಅಪರಾಧ ಪ್ರಕರಣಗಳ ಜತೆಗೆ ಪತಿಯಿಂದ ಪತ್ನಿ ಮೇಲೆ ಹಲ್ಲೆ, ಕುಟುಂಬಸ್ಥರಿAದ ಹಲ್ಲೆ ಸೇರಿದಂತೆ ಕೌಟುಂಬಿಕ ದೌರ್ಜನ್ಯ, ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದ್ದರೂ ಕಡಿಮೆ ಆಗದಿರುವ ವರದಕ್ಷಿಣೆ ಕಿರುಕುಳ ಪ್ರಕರಣಗಳು, ಕ್ರೂರ ಮಾನಸಿಕತೆಯ ಅತ್ಯಾಚಾರ ಪ್ರಕರಣಗಳು, ಲೈಂಗಿಕ ಕಿರುಕುಳ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಲೇ ಇರುತ್ತದೆ. ಇದಕ್ಕಾಗಿ ವಿಶೇಷವಾಗಿ ಮಹಿಳಾ ಪೊಲೀಸ್ ಠಾಣೆಗಳನ್ನೂ ಸರ್ಕಾರ ತೆರೆದಿದೆ. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಕೊಡಗು ಕೂಡ ಹೊರತಾಗಿಲ್ಲ. ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯದ ಒಟ್ಟು 70 ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. 16 ವರದಕ್ಷಿಣೆ ಕಿರುಕುಳ ಪ್ರಕರಣಗಳೂ ವರದಿಯಾಗಿದೆ. ಅತ್ಯಾಚಾರಕ್ಕೆ ಸಂಬAಧಿಸಿದAತೆ 15 ಪ್ರಕರಣಗಳು ಇಲ್ಲಿಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ವರ್ಷಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಕೊಡಗಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬAಧಿಸಿದAತೆ ಬರೋಬ್ಬರಿ 158 ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. 2022ರಲ್ಲಿ ರಾಜ್ಯದಲ್ಲಿ ಒಟ್ಟು 5858 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದರೆ, ಕೊಡಗಿನಲ್ಲಿ 50 ಪ್ರಕರಣಗಳು ದಾಖಲಾಗಿದ್ದವು. 2023ರಲ್ಲಿ ರಾಜ್ಯಾದ್ಯಂತ 6492 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಕೊಡಗಿನಲ್ಲಿ 53 ಪ್ರಕರಣಗಳು ವರದಿಯಾಗಿದ್ದವು. 2024ರಲ್ಲಿ 6326 ಪ್ರಕರಣಗಳು ರಾಜ್ಯದ ವಿವಿಧೆಡೆಯಲ್ಲಿ ದಾಖಲಾಗಿದ್ದು, ಕೊಡಗಿನಲ್ಲಿ 55 ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿದೆ.
2022ರಲ್ಲಿ ರಾಜ್ಯಾದ್ಯಂತ ಒಟ್ಟು 2784 ಕೌಟುಂಬಿಕ ದೌರ್ಜನ್ಯಗಳಿಗೆ ಸಂಬAಧಿಸಿದ ಪ್ರಕರಣಗಳು ದಾಖಲಾದರೆ, ಕೊಡಗಿನ ಪಾಲು ಇದರಲ್ಲಿ 25 ಪ್ರಕರಣಗಳು. 2023ರಲ್ಲಿ ರಾಜ್ಯದ ವಿವಿಧೆಡೆ 2960 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಕೊಡಗಿನಲ್ಲಿ 24 ಪ್ರಕರಣಗಳು ನಡೆದಿದೆ. 2024ರಲ್ಲಿ ರಾಜ್ಯಾದ್ಯಂತ 2924 ಪ್ರಕರಣಗಳು ನಡೆದಿದ್ದರೆ ಕೊಡಗಿನಲ್ಲಿ 21 ಪ್ರಕರಣಗಳು ದಾಖಲಾಗಿದೆ.
ಸಮಾಜ ಶುಶಿಕ್ಷಿತವಾಗುತ್ತಿದ್ದರೂ ವರದಕ್ಷಿಣೆ ಕಿರುಕುಳ ಪ್ರಕರಣಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. 2022ರಲ್ಲಿ 2240 ಪ್ರಕರಣಗಳು ರಾಜ್ಯದಲ್ಲಿ ವರದಿ ಆಗಿದ್ದು, ಇದರಲ್ಲಿ ಕೊಡಗಿನ ಪಾಲು 2 ಪ್ರಕರಣಗಳಾಗಿದೆ. 2023ರಲ್ಲಿ 2333 ಪ್ರಕರಣಗಳು ರಾಜ್ಯಾದ್ಯಂತ ದಾಖಲಾಗಿದ್ದು 8 ಪ್ರಕರಣಗಳು ಕೊಡಗಿನಲ್ಲಿ ವರದಿಯಾಗಿದೆ. 2024ರಲ್ಲಿ 1963 ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದು, ಕೊಡಗಿನಲ್ಲಿ 6 ಪ್ರಕರಣಗಳು ವರದಿಯಾಗಿದೆ.
ಅತ್ಯಾಚಾರಕ್ಕೆ ಸಂಬAಧಿಸಿದAತೆ 2022ರಲ್ಲಿ ರಾಜ್ಯದಲ್ಲಿ 537 ಪ್ರಕರಣಗಳು ದಾಖಲಾಗಿದ್ದು, ಕೊಡಗಿನಲ್ಲಿ 4 ಪ್ರಕರಣಗಳು ವರದಿಯಾಗಿದೆ. 2023ರಲ್ಲಿ ರಾಜ್ಯದಲ್ಲಿ 601 ಪ್ರಕರಣಗಳು ವಿವಿಧೆಡೆ ದಾಖಲಾಗಿದ್ದರೆ, ಕೊಡಗಿನಲ್ಲಿ 6 ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿದೆ. 2024ರಲ್ಲಿ ರಾಜ್ಯಾದ್ಯಂತ 735 ಪ್ರಕರಣಗಳು ವರದಿಯಾಗಿದ್ದರೆ, ಕೊಡಗಿನಲ್ಲಿ 5 ಪ್ರಕರಣಗಳು ದಾಖಲಾಗಿರುವುದಾಗಿ ಸರ್ಕಾರಿ ದಾಖಲೆಗಳು ತಿಳಿಸುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ಮೂಲಕ ಸಮಾಜದ ಸ್ವಾಸ್ಥö್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ.
ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಫ್ರೀ ಆಂಡ್ ಫೇರ್ ರಿಜಿಸ್ಟೆçÃಷನ್ ಆಫ್ ಕೇಸಸ್ ಎನ್ನುವ ಘೋಷಣೆಯನ್ನು ರಾಜ್ಯ ಪೊಲೀಸ್ ಇಲಾಖೆ ಮೂಲಕ ಪ್ರಚುರಪಡಿಸಲಾಗಿದೆ. ಇಂಥ ಪ್ರಕರಣಗಳಲ್ಲಿ ತನಿಖಾ ಗುಣಮಟ್ಟ ಹೆಚ್ಚಿಸುವ ಸಲುವಾಗ ರಾಜ್ಯಾದ್ಯಂತ 206 ಸೀನ್ ಆಫ್ ಕ್ರೆöÊಮ್ ಅಧಿಕಾರಿಗಳನ್ನು ನೇಮಿಸಿ ಎಲ್ಲ ಕಡೆಗಳಿಗೂ ನಿಯೋಜನೆ ಮಾಡಲಾಗಿದೆ.
ಎಲ್ಲಾ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ರಾಜ್ಯ ಮಟ್ಟದ ಕ್ರಿಮಿನಲ್ ಖುಲಾಸೆಗಳ ಪರಿಶೀಲನ ಸಮಿತಿ, ವಲಯ, ಕಮಿಷನರೇಟ್ ಮಟ್ಟದ ಕ್ರಿಮಿನಲ್ ಖುಲಾಸೆಗಳ ಪರಿಶೀಲನ ಸಮಿತಿ ಮತ್ತು ಜಿಲ್ಲಾ ಮಟ್ಟದ ಕ್ರಿಮಿನಲ್ ಖುಲಾಸೆಗಳ ಪರಿಶೀಲನ ಸಮಿತಿಗಳನ್ನು ರಚಿಸಲಾಗಿದೆ. ಮಹಿಳಾ ಸಹಾಯವಾಣಿ (1091) ಮತ್ತು 22943225 ಸಂಖ್ಯೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಮಹಿಳಾ ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸಿ ತ್ವರಿತವಾಗಿ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಮಹಿಳಾ ಸುರಕ್ಷತೆ ಸಂಬAಧವಾಗಿ ಬೆಂಗಳೂರಿನಲ್ಲಿ ಹೊಯ್ಸಳ ಹಾಗೂ ರಾಜ್ಯಾದ್ಯಂತ ಡಯಲ್ 112 ಇಆರ್‌ಎಸ್‌ಎಸ್ ಅಡಿಯಲ್ಲಿ ಒಟ್ಟು 463 ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 1066 ಪೊಲೀಸ್ ಠಾಣೆಗಳಲ್ಲಿ ಕೊಡಗು ಸೇರಿದಂತೆ 1050 ಮಹಿಳಾ ಸಹಾಯವಾಣಿ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ತಡೆಗೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಸಿಸಿಪಿಡಬ್ಯೂಸಿ ಪೋರ್ಟಲ್‌ನಲ್ಲಿ ಆನ್-ಲೈನ್‌ನಲ್ಲಿ ದಾಖಲಾಗುವ ದೂರುಗಳನ್ನು ಸಿಇಎನ್ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿ ಕ್ರಮ ವಹಿಸಲಾಗುತ್ತಿದೆ.
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು, ಸ್ಥಳೀಯ ದೂರು ಸಮಿತಿಗಳನ್ನು ರಚಿಸಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಸರ್ಕಾರವು ಕಾನೂನಿಗೆ ತಿದ್ದುಪಡಿ ತಂದಿದ್ದು, ಈ ತಿದ್ದುಪಡಿಯಾದ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ
ಡಾ. ಜಿ. ಪರಮೇಶ್ವರ, ಗೃಹ ಸಚಿವ
ಕೊಡಗಿನಲ್ಲಿ ಮಹಿಳಾ ದೌರ್ಜನ್ಯ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿರುವುದು ಆತಂಕದ ವಿಚಾರ. ಜತೆಗೆ ದೌರ್ಜನ್ಯ ಕಾಯ್ದೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದನ್ನೂ ಕಾಣಬಹುದಾಗಿದೆ. ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಮುಚ್ಚಿ ಹೋಗುತ್ತಿದ್ದ ಪ್ರಕರಣಗಳು, ಈಗ ದಾಖಲಾಗುತ್ತಿರುವುದು ಕೂಡ ಗಮನಾರ್ಹ. ಕೆಲವೊಮ್ಮೆ ಕಾನೂನಿನ ದುರುಪಯೋಗ ಆಗುವುದೂ ಇದೆ. ಆಧುನಿಕ ಜಗತ್ತಿನ ಪಲ್ಲಟಗಳ ಪರಿಣಾಮಕ್ಕೆ ಸುಶಿಕ್ಷಿತ ಕೊಡಗು ಜಿಲ್ಲೆ ಕೂಡ ಹೊರತಾಗಿಲ್ಲ. ಕೌಟುಂಬಿಕ ವ್ಯವಸ್ಥೆ ಒಳಗೆ ಹಿರಿಯರ ನಡವಳಿಕೆಗಳು ಮಕ್ಕಳ ಉತ್ತಮ ವಿಕಸನಕ್ಕೆ ಪೂರಕವಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳನ್ನು ನಿಯಂತ್ರಿಸಬಹುದು.
ಕೆದಂಬಾಡಿ ಕಾಂಚನ ಗೌಡ, ಉಪನ್ಯಾಸಕಿ, ಮಡಿಕೇರಿ