ನ್ಯೂಸ್

VIDEO| ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಭಾಷಾಭಿಮಾನ ಮೆರೆದ ಕೇರಳ ಶಾಸಕ!

ತಿರುವನಂತಪುರಂ: ಕೇರಳದ 15ನೇ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದೆ. ಹೊಸದಾಗಿ ಆಯ್ಕೆಯಾದ ಶಾಸಕರು ಹಂಗಾಮಿ ಸ್ಪೀಕರ್​ ಸಮ್ಮುಖದಲ್ಲಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವೀಶೇಷವೆಂದರೆ ಕೇರಳದ ವಿಧಾನಸಭೆಯಲ್ಲಿ ಕೆಲ ಶಾಸಕರು ವಿವಿಧ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವರು ದೇವರ ಹೆಸರಿನಲ್ಲಿ, ಇನ್ನು ಕೆಲವರು ಶ್ರದ್ಧಾಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅದರಲ್ಲೂ ಕಾಸರಗೋಡಿನ ಮಂಜೇಶ್ವರಂ ಶಾಸಕ ಎ.ಕೆ.ಎಮ್​. ಅಶ್ರಫ್​ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷಾಭಿಮಾನವನ್ನು ಮೆರೆದರು.

ಮುವಾಟ್ಟುಪುಳ ಶಾಸಕ ಮ್ಯಾಥೀವ್​ ಕುಜಲ್ನಾದನ್​ ಇಂಗ್ಲಿಷ್​ ಭಾಷೆಯಲ್ಲಿ ಪ್ರಮಾಣ ವಚನ ಪಡೆದರು.

ಮತ್ತೊಮ್ಮೆ ಕೇರಳದ ಗದ್ದುಗೆ ಏರಿರುವ ಪಿಣರಾಯಿ ವಿಜಯನ್​ ನೇತೃತ್ವದ ಹೊಸ ಸರ್ಕಾರದಲ್ಲಿ 53 ಹೊಸ ಶಾಸಕರಿದ್ದಾರೆ. 10 ಮಹಿಳಾ ಶಾಸಕರಿರುವುದು ಇನ್ನೊಂದು ವಿಶೇಷವಾಗಿದೆ. (ಏಜೆನ್ಸೀಸ್​)