ಸಾಂದರ್ಭಿಕ ಚಿತ್ರ  
ನ್ಯೂಸ್

ಕರ್ತವ್ಯಲೋಪ ಮಾಡಿದ್ದ ಅಶೋಕನಗರದ ಪೊಲೀಸ್ ಅಧಿಕಾರಿ ಅಮಾನತು…

Webdesk - Athul Damale

ಬೆಂಗಳೂರು: ಕರ್ತವ್ಯಲೋಪ ಮಾಡಿದ ಹಿನ್ನಲೆಯಲ್ಲಿ ಅಶೋಕನಗರದ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಕಮಿಷನರ್ ದಯಾನಂದ್, ಅಶೋಕನಗರದ ಇನ್ಸ್ಪೆಕ್ಟರ್ ಆಗಿರುವ ಶ್ರೀಕಾಂತ್ ತೋಟಗಿ ಎಂಬುವವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಯಾಕೆ?

ಸಿಸಿಬಿ, ಅಶೋಕನಗರ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್ ಒಂದರ ಮೇಲೆ ಇತ್ತೀಚೆಗೆ ದಾಳಿ ಮಾಡಿತ್ತು. ದಾಳಿ ವೇಳೆ ಹೋಟೆಲ್ ಒಳಗೆ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಪತ್ತೆಯಾಗಿತ್ತು.

ಈ ಸಂದರ್ಭ ತನಿಖೆ ನಡೆಸಿದ ಸಿಸಿಬಿಗೆ, ಸಾಕಷ್ಟು ದಿನಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಇನ್ಸ್ ಪೆಕ್ಟರ್ ಕ್ರಮ ಕೈಗೊಳ್ಳದ ಬಗ್ಗೆ ತಿಳಿದುಬಂದಿದ್ದು ವರದಿ ನೀಡಿತ್ತು. ವರದಿ ಆಧರಿಸಿ ತನಿಖೆ ಮಾಡಿದ್ದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡರಿಂದ ಇನ್ಸ್ ಪೆಕ್ಟರ್ ವಿರುದ್ದ ಕಮಿಷನರ್ ಗೆ ರಿಪೋರ್ಟ್  ನೀಡಿದ್ದರು.

ರಿಪೋರ್ಟ್ ಪರಿಶೀಲಿಸಿದಾಗ ಕರ್ತವ್ಯಲೋಪ ಕಂಡುಬಂದಿದ್ದು ಕಮಿಷನರ್ ಅಶೋಕನಗರದ ಇನ್ಸ್ ಪೆಕ್ಟರ್ ಶ್ರೀಕಾಂತ್ ತೋಟಗಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.