ದೆಹಲಿ:ಪಾಕಿಸ್ತಾನಲ್ಲಿ 2011ರಲ್ಲಿ ಮೃತಪಟ್ಟ 350 ಹಿಂದುಗಳು ಸೇರಿ 50 ಸಿಖ್ಖರ ಚಿತಾಭಸ್ಮವನ್ನು ಗಂಗೆಯಲ್ಲಿ ವಿಸರ್ಜನೆ ಮಾಡುವ ಸಲುವಾಗಿ ಮಂಗಳವಾರ ಪಾಕಿಸ್ತಾನದಿಂದ ಅಟ್ಟಾರಿ-ವಾಘ ಗಡಿ ಮೂಲಕ ಭಾರತಕ್ಕೆ ತರಲಾಯಿತು.
ಇದನ್ನೂ ಓದಿ:ಜನರ ಮೇಲೆ ಸಾಲದ ಹೊರೆಯನ್ನು ಹೊರಿಸಿದ ರಾಜ್ಯ ಸರ್ಕಾರ: ವಿಪಕ್ಷ ನಾಯಕ ಆರ್.ಅಶೋಕ ಆರೋಪ | State government
ಈ ಚಿತಾಭಸ್ಮವನ್ನು 8 ವರ್ಷಗಳ ಕಾಲ ಸ್ಮಶಾನದಲ್ಲಿಯೇ ಇಡಲಾಗಿತ್ತು ಎಂದು ವರದಿಯಾಗಿದೆ. ಏಳು ಸದಸ್ಯರ ನಿಯೋಗದ ನೇತೃತ್ವವಹಿಸಿದ್ದ ತಂಡದ ಮುಖ್ಯಸ್ಥ ರಾಮನಾಥ್ ಮಹಾರಾಜ್ ಈ ಕುರಿತು ಮಾತನಾಡಿ, ಸನಾತನ ಧರ್ಮದ ಅನುಗುಣವಾಗಿ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಇದೇ ಫೆ.21ರಂದು ವಿಸರ್ಜಿಸಲಾಗುವುದು. ಅಲ್ಲದೆ, ವಿಸರ್ಜನೆ ಮುಂಚೆ ದೆಹಲಿಯ ನಿಗಮಭೋದ್ ಘಾಟ್ನಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ತಂಡ ತಿಳಿಸಿದೆ.
400 ಜನ ಮೃತರಲ್ಲಿ ಕೆಲವರು ಅಪಾಘಾತದಲ್ಲಿ, ಸಹಜವಾಗಿ ಮೃತಪಟ್ಟಿದ್ದಾರೆ. ಇದರಲ್ಲಿ ಮಕ್ಕಳು ಇದ್ದಾರೆ. ಅಲ್ಲಿನ ಹಿಂದುಗಳು ಅಸೆಯಂತೆಯೇ ಎಲ್ಲರ ಚಿತಾಭಸ್ಮವನ್ನು ಗಂಗೆಯಲ್ಲಿ ವೀಲಿನ ಮಾಡಲಾಗುವುದು. 2011 ರಿಂದ ವೀಸಾ ಸಮಸ್ಯೆ ಸೇರಿದಂತೆ ಎರಡು ದೇಶಗಳ ಇತರೆ ಸಮಸ್ಯೆಗಳಿಂದ ಅಲ್ಲಿಗೆ ತೆರಳಿ ಚಿತಾಭಸ್ಮ ತರಲು ಸಾಧ್ಯವಾಗಲಿಲ್ಲ. ಈ ಬಾರಿ ಅದು ಸಾಧ್ಯವಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನಕ್ಕೆ ಹೋಗಿ ಮೂರು ಬಾರಿ ಚಿತಾಭಸ್ಮ ತಂದು ಗಂಗೆಯಲ್ಲಿ ವೀಲಿನ ಮಾಡಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)