ನವದೆಹಲಿ: ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ಜತೆ ಯಾವುದೇ ಹಮ್ಮುಬಿಮ್ಮು ಇಲ್ಲದೇ ಸರಳ ರೀತಿಯಲ್ಲಿ ಬೆರೆಯುವ ಗುಣ. ಧೋನಿಯ ಸಿಂಪಲ್ ಜೀವನದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಎಂ ಎಸ್ ಧೋನಿ, ತಮ್ಮ ನಿವಾಸದಿಂದ ಸೆಕ್ಯೂರಿಟಿ ಗಾರ್ಡ್‌ವೊಬ್ಬರನ್ನು ಧೋನಿ ತಮ್ಮ ಬೈಕ್‌ನಲ್ಲಿ ಮೈನ್ ಗೇಟ್‌ಗೆ ಡ್ರಾಪ್ ಮಾಡಿರುವ ಹಳೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಮಹೇಂದ್ರ ಸಿಂಗ್ ಧೋನಿಯವರ ಫಾರ್ಮ್ ಹೌಸ್ ಎಷ್ಟು ದೊಡ್ಡದಿದೆ ಎಂದರೆ, ಸೆಕ್ಯೂರಿಟಿ ಗಾರ್ಡ್ ಅವರನ್ನು ಪ್ರವೇಶದ್ವಾರಕ್ಕೆ ತಂದು ಬಿಡಲು ಬೈಕ್‌ನಲ್ಲಿ ಬರಬೇಕಾಗುವಷ್ಟ ವಿಶಾಲವಾಗಿದೆ. ಹೀಗಿತ್ತು ನೋಡಿ ಎನ್ನುವುದನ್ನು ನೀವೆ ನೋಡಿ..
ಕೆಲದಿನಗಳ ಹಿಂದಷ್ಟೇ ಧೋನಿ ಅವರು ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ತಮ್ಮ ಟ್ಯಾಬ್ಲೆಟ್‌ನಲ್ಲಿ ಕ್ಯಾಂಡಿ ಕ್ರಶನ್ ಗೇಮ್ ಆಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಬ್ಬರು ಧೋನಿಗೆ ಚಾಕಲೇಟ್‌ಗಳನ್ನು ನೀಡುತ್ತಿರುವುದು ಕಂಡುಬಂದಿದೆ.
ಮಹೇಂದ್ರ ಸಿಂಗ್ ಧೋನಿ ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ದೃತಿಗೆಡದೇ ತಾಳ್ಮೆಯಿಂದ ತಂಡವನ್ನು ಮುನ್ನಡೆಸುವ ಗುಣ ಹೊಂದಿರುವುದರಿಂದಲೇ ಮಹಿಯನ್ನು ಕ್ಯಾಪ್ಟನ್ ಕೂಲ್ ಎಂದು ಕರೆಯಲಾಗುತ್ತದೆ.