ನ್ಯೂಸ್

ಮರಳಿನಲ್ಲಿ ಡೊನಾಲ್ಡ್ ದಂಪತಿ: ಬೇಗ ಮರಳಿ ಎಂದು ಹಾರೈಸಿದ ಕಲಾವಿದ..

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಅವರ ಪತ್ನಿ ಮೆಲನಿಯಾ ಟ್ರಂಪ್ ಇಬ್ಬರೂ ಕರೊನಾ ಸೋಂಕಿತರಾಗಿರುವುದು ಗೊತ್ತಿರುವಂಥದ್ದೇ. ಇದೀಗ ಅವರಿಬ್ಬರಿಗೂ ಬೇಗ ಗುಣವಾಗಿ ಮರಳಿ ಎಂದು ಮರಳಿನಿಂದಲೇ ಕಲಾವಿದರೊಬ್ಬರು ಹಾರೈಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಮರಳು ಚಿತ್ರ ಕಲಾವಿದ (ಸ್ಯಾಂಡ್​ ಆರ್ಟ್​) ಸುದರ್ಶನ್​ ಪಟ್ನಾಯಕ್​ ಮರಳಿನಲ್ಲಿ ಡೊನಾಲ್ಡ್​ ದಂಪತಿಯ ಕಲಾಕೃತಿ ರಚಿಸಿ, ಅದರ ಮೇಲೆ 'ಗೆಟ್​ ವೆಲ್​ ಸೂನ್'​ ಎಂಬುದಾಗಿ ಹಾರೈಸಿದ್ದಾರೆ. ಒಡಿಶಾದ ಪುರಿ ಕಡಲತೀರದಲ್ಲಿ ಅವರು ರಚಿಸಿರುವ ಈ ಕಲಾಕೃತಿ ಹಲವರ ಗಮನ ಸೆಳೆದಿದೆ.

ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟ ಹಿನ್ನೆಲೆಯಲ್ಲಿ ಡೊನಾಲ್ಡ್​ ಅವರು ವಾಷಿಂಗ್ಟನ್​ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುದರ್ಶನ್ ಪಟ್ನಾಯಕ್​ ಹೀಗೆ ಆಗಾಗ ಮರಳು ಕಲೆ ಮೂಲಕ ಗಮನ ಸೆಳೆಯುತ್ತಿರುತ್ತಾರೆ.