ಭಾರತೀಯ ವಾಯುಪಡೆಯ (ಐಎಎಫ್) ಆಧುನೀಕರಣದ ಭಾಗವಾಗಿ ಮಿಗ್-21 ವಿಮಾನಗಳನ್ನು ಹಂತ ಹಂತವಾಗಿ ಸೇವೆಯಿಂದ ತೆಗೆದು ಹಾಕಲಾಗುತ್ತಿದೆ. ಇದರ ಭಾಗವಾಗಿ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 51 ಸ್ಕ್ವಾಡ್ರನ್ ಸ್ವೋರ್ಡ್ ಆರ್ಮ್ಸ್ ಸೆ. 30ರಂದು ನಿವೃತ್ತಿಯಾಗಲಿದೆ.
- ಉಳಿದ ಮೂರು ಸ್ಕ್ವಾಡ್ರನ್ಗಳನ್ನು (ತಂಡಗಳನ್ನು) 2025ರ ವೇಳೆಗೆ ಸೇವೆಯಿಂದ ನಿವೃತ್ತಿಗೊಳಿಸುವ ಗುರಿಯನ್ನು ವಾಯುಪಡೆ ಹೊಂದಿದೆ.
- ಈಗ ನಿವೃತ್ತಿಯಾಗುತ್ತಿರುವ 51 ಸ್ಕ್ವಾಡ್ರನ್, ಐಎಎಫ್ನ ಪ್ರಮುಖ ಸ್ಕಾ್ವಡ್ರನ್ಗಳಲ್ಲಿ ಒಂದಾಗಿದೆ. ಇದು ಪಾಕಿಸ್ತಾನದ ವಿರುದ್ಧ 1999ರ ಕಾರ್ಗಿಲ್ ಯುದ್ಧದ ‘ಅಪರೇಷನ್ ಸಫೇದ್ ಸಾಗರ್’ನಲ್ಲಿ ಕಾರ್ಯನಿರ್ವಹಿಸಿತ್ತು.
- ಮಿಗ್ -21 ವಿಮಾನವು ಸೋವಿಯತ್ ಕಾಲದ ಸಿಂಗಲ್ ಇಂಜಿನ್ ಯುದ್ಧ ವಿಮಾನವಾಗಿದೆ. 1960ರ ದಶಕದಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಗೊಂಡಿತ್ತು.
- ಇದು ಭೂಮಿ ಮತ್ತು ಆಗಸ ಎರಡೂ ಕಡೆಯಲ್ಲಿ ಶತ್ರು ವಿಮಾನಗಳನ್ನು ಹೊಡೆದು ಉರುಳಿಸಬಲ್ಲ ಸಾಮರ್ಥ್ಯ ಹೊಂದಿದೆ.
- 51 ಸ್ಕ್ವಾಡ್ರನ್ ನೀಡಿರುವ ಗಮನಾರ್ಹ ಕೊಡುಗೆಗಾಗಿ ಒಂದು ವಾಯುಸೇನಾ ಪದಕ ಮತ್ತು ಮೂರು ಉಲ್ಲೇಖ ರವಾನೆಗಳನ್ನು ನೀಡಲಾಗಿದೆ. ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸ್ಕ್ವಾಡ್ರನ್ಗೆ ಕಾಶ್ಮೀರ ಕಣಿವೆಯ ವಾಯು ರಕ್ಷಣಾ ಕಾರ್ಯ ವಹಿಸಲಾಗಿತ್ತು.
- 1980ರ ದಶಕದಿಂದ 400ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. 200ಕ್ಕೂ ಹೆಚ್ಚು ಪೈಲಟ್ಗಳು ಮತ್ತು 60 ನಾಗರಿಕರನ್ನು ಬಲಿ ತೆಗೆದುಕೊಂಡಿವೆ.
- 2019ರ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿಯ ನಂತರ ಭಾರತೀಯ ವಾಯುಪಡೆ ಪಾಕ್ನ ಉಗ್ರರ ಶಿಬಿರದ ಮೇಲೆ ವಾಯುದಾಳಿ ಮಾಡಿದಕ್ಕೆ ಪ್ರತಿಯಾಗಿ ಪಾಕ್ನ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ಮೀರಿ ಬಂದಿದ್ದವು. ಆಗ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಮಿಗ್-21 ವಿಮಾನ ಬಳಸಿಯೇ ಪಾಕ್ನ ಅತ್ಯಾಧುನಿಕ ಎಫ್-16 ವಿಮಾನವನ್ನು ಹಿಮ್ಮೆಟ್ಟಿಸಿದ್ದರು.