ಬೆಂಗಳೂರು: ದಿ ಆರ್ಟ್ ಆಫ್ ಲಿವಿಂಗ್(Art of Living) ಸಂಸ್ಥೆಯ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜಪಾನಿ ಭಾಷಾ ಅಕಾಡೆಮಿಯನ್ನು ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಮತ್ತು ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಅಕಾಡೆಮಿಯನ್ನು ಉದ್ಘಾಟಿಸಿದರು.
ಗುರುದೇವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾದ ಜಪಾನಿ ಭಾಷಾ ಅಕಾಡೆಮಿಯು ಭಾರತ–ಜಪಾನ್ ಸಂಬಂಧವನ್ನು ಬಲಪಡಿಸುವುದರೊಂದಿಗೆ, ಎರಡೂ ದೇಶಗಳಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಜೀವ ಅಸ್ತಿತ್ವವನ್ನು ಮತ್ತಷ್ಟು ವ್ಯಾಪಕಗೊಳಿಸುವ ಉದ್ದೇಶವನ್ನು ಹೊಂದಿದೆ. ಜಗತ್ತಿನ ಅತಿದೊಡ್ಡ ಸ್ವಯಂಸೇವಾಧಾರಿತ ಸಂಸ್ಥೆಯಾದ ದಿ ಆರ್ಟ್ ಆಫ್ ಲಿವಿಂಗ್ 180 ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದ್ದು, ಈ ಉಭಯ ರಾಷ್ಟ್ರಗಳ ಜನರನ್ನು ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯಗಳ ಮೂಲಕ ಒಂದಾಗಿಸಲು ಶ್ರಮಿಸುತ್ತಿದೆ.
ದಿ ಆರ್ಟ್ ಆಫ್ ಲಿವಿಂಗ್ ಮಾನವ ಸಂಪನ್ಮೂಲ ವಿಭಾಗವು ಜಪಾನಿನ ಉದ್ಯಮಗಳೊಂದಿಗೆ ನೇರ ಸಂಪರ್ಕ ಹೊಂದಿ, ಪದವೀಧರರಿಗೆ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಶ್ರಮಿಸುತ್ತಿದೆ. ಇದರಿಂದ ಉಭಯ ದೇಶಗಳ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಹಯೋಗ ಮತ್ತಷ್ಟು ಗಾಢಗೊಳ್ಳಲಿದೆ. ಮುಖ್ಯವಾಗಿ, ಜಪಾನಿನಲ್ಲಿ ವಿಸ್ತರಿಸಿರುವ ಆರ್ಟ್ ಆಫ್ ಲಿವಿಂಗ್ ಸಮುದಾಯ ಜಾಲವು ಅಲ್ಲಿ ತೆರಳುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಬಲವಾದ ಬೆಂಬಲ ವ್ಯವಸ್ಥೆಯನ್ನು ಒದಗಿಸುತ್ತದೆ; ಹೊಸ ಪರಿಸರದಲ್ಲಿ ಹೊಂದಿಕೊಳ್ಳಲು ಸಹಾಯ ಮಾಡಿ, ವಿದೇಶದಲ್ಲಿ ಅನೇಕರು ಅನುಭವಿಸುವ ಏಕಾಂತವನ್ನು ನಿವಾರಿಸುತ್ತದೆ. ಆಧ್ಯಾತ್ಮಿಕ ಹಾಗೂ ಸಾಮಾಜಿಕ ಬಲಿಷ್ಠತೆಯ ಮೂಲಕ, ಆರ್ಟ್ ಆಫ್ ಲಿವಿಂಗ್ ಪ್ರತಿಯೊಬ್ಬರೂ ಎಲ್ಲೆಡೆ ಸಂಪರ್ಕಿತರು, ಸುರಕ್ಷಿತರು ಮತ್ತು ಬೆಂಬಲಿತರಾಗಿರುವ ಭಾವನೆ ಹೊಂದುವಂತೆ ಪ್ರಯತ್ನಿಸುತ್ತಿದೆ.
ಜಪಾನಿ ಭಾಷಾ ತರಬೇತಿಯನ್ನು ಈ ರೀತಿಯಲ್ಲಿ ನೀಡಲಿದೆ
1.ಮೂರು ತಿಂಗಳ ಕ್ರಾಷ್ ಕೋರ್ಸ್
2.ಆರು ತಿಂಗಳ ಕಾರ್ಯಕ್ರಮ
3.ಒಂದು ವರ್ಷದ ಸಮಗ್ರ ಕೋರ್ಸ್
ಪ್ರತಿ ಕೋರ್ಸ್ ಒಳಗೊಂಡಿದೆ
1.ಸಾಫ್ಟ್ ಸ್ಕಿಲ್ಸ್ ತರಬೇತಿ
2.ಸಾಂಸ್ಕೃತಿಕ ಪರಿಚಯ
3.ಕೆಲಸದ ಸ್ಥಳದ ಶಿಷ್ಟಾಚಾರ
ಈ ತರಬೇತಿಯು ಮೌಲ್ಯಾಧಾರಿತವಾಗಿರಲಿದ್ದು, ಇದರಲ್ಲಿ ಭಾಗವಹಿಸುವವರೆಲ್ಲರೂ ಆರ್ಟ್ ಆಫ್ ಲಿವಿಂಗ್ ಧ್ಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ಅವರಲ್ಲಿನ ಹೊಂದಿಕೊಳ್ಳುವ ಸಾಮರ್ಥ್ಯ, ಸಹನಶೀಲತೆ ಮತ್ತು ಆತ್ಮವಿಶ್ವಾಸವು ವೃದ್ಧಿಯಾಗಲಿದ್ದು, ಅವರು ಜಾಗತಿಕ ನಾಗರಿಕರಾಗಿ ಬೆಳೆಯಲು ಪ್ರೇರಣೆಯಾಗುತ್ತದೆ. ಸ್ಥಳೀಯ ಜಪಾನಿ ಭಾಷಾ ಪರಿಣಿತರು ಕಲಿಯುವವರ ಉಚ್ಛಾರಣೆ ಮತ್ತು ಸಂವಾದದ ನಿರರ್ಗಳತೆಯನ್ನು ಪರಿಷ್ಕರಿಸಲು ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮವು ಆನ್‌ಲೈನ್ ಮತ್ತು ಆಫ್‌ಲೈನ್ (ಹೈಬ್ರಿಡ್) ರೂಪಗಳಲ್ಲಿ ಲಭ್ಯವಿದ್ದು, 10ನೇ ತರಗತಿಯು ಮುಗಿದವರು ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ ಲಭ್ಯವಾಗಲಿದೆ.