ಹೈದರಾಬಾದ್: ಶಾಲಾ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅಪ್ರಾಪ್ತರಲ್ಲಿ ಟಿಆರ್ಎಸ್ ಮುಖಂಡನ ಪುತ್ರನೂ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹೈದರಾಬಾದ್ನ ಜುಬ್ಲೀ ಹಿಲ್ಸ್ನಲ್ಲಿ ಕಳೆದ ವಾರ ಶಾಲಾಬಾಲಕಿಯ ಮೇಲೆ ನಾಲ್ವರು ಅಪ್ತಾಪ್ತರಿಂದ ಅತ್ಯಾಚಾರ ನಡೆದಿತ್ತು. ಈ ನಾಲ್ವರ ಪೈಕಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷದ ಪ್ರಮುಖ ಮುಖಂಡನ ಮಗನೂ ಸೇರಿದ್ದಾನೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ. ಇನ್ನು ಪ್ರಕರಣದಲ್ಲಿ ಗೃಹ ಸಚಿವರ ಮೊಮ್ಮಗನ ವಿರುದ್ಧವೂ ಆರೋಪ ಕೇಳಿಬಂದಿದ್ದು, ಸದ್ಯ ಈ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಸದುದ್ದೀನ್ ಮಲಿಕ್ ಎಂದು ಗುರುತಿಸಲಾಗಿದ್ದು, 17 ವರ್ಷದ ಈತ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಮೇ 28 ರಂದು ಪಾರ್ಟಿ ನಡೆಸಿ ಸ್ನೇಹಿತರೊಂದಿಗೆ ವಾಪಸ್ ಬರುತ್ತಿದ್ದ ವೇಳೆ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸದ್ಯ ಪ್ರಕರಣದಲ್ಲಿ ದೊಡ್ಡ ದೊಡ್ಡ ರಾಜಕೀಯ ಮುಖಂಡರ ಮಕ್ಕಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್)