ಹಾವೇರಿ: 500 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಸವಣೂರು ಪಟ್ಟಣದಲ್ಲಿ ನಡೆದಿದೆ.
ಸಂತೋಷ್ ಗುಜ್ಜರ್ (45) ಬಂಧಿತ. ಈತ ರಾಣೆಬೆನ್ನೂರು ನಿವಾಸಿಯಾಗಿದ್ದು ಬೇಕರಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಚಲಾಯಿಸಿದ್ದ. ಆದರೆ ಈ ನೋಟುಗಳ ಬಗ್ಗೆ ಕೆಲವರಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅದರ ಅನ್ವಯ ಸಂತೋಷ್ ಗುಜ್ಜರ್ ಬಳಿ ಪೊಲೀಸರು ವಿಚಾರಿಸಿದಾಗ ಆತ ಸೂಕ್ತ ಉತ್ತರ ನೀಡಲಿಲ್ಲ.
ಖೋಟಾ ನೋಟು ಎಂದು ಗೊತ್ತಿದ್ದರೂ ಅದನ್ನು ಚಲಾವಣೆ ಮಾಡಿದ ಆರೋಪದಡಿ ಸವಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.