ನ್ಯೂಸ್

ದೇಗುಲಗಳಲ್ಲಿ ಕನ್ನ ಹಾಕಿದ್ದ ಇಬ್ಬರು ಕಳ್ಳರ ಬಂಧನ, ಚಿನ್ನಾಭರಣಗಳ ವಶ

ಚಿಕ್ಕಬಳ್ಳಾಪುರ:ಕಳೆದ ಕೆಲ ದಿನಗಳ ಹಿಂದೆ ಗುಡಿಬಂಡೆ ತಾಲೂಕಿನ ದಪ್ಪರ್ತಿಯ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಲಕ್ಷಾಂತರ ರೂ ಮೌಲ್ಯದ ಬೆಳ್ಳಿ, ಬಂಗಾರ ಆಭರಣ, ಹುಂಡಿ ಹಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ತುರುಕಲಪಟ್ಟಣಂನ ಚಾಕಲಿ ಪವನ್‌ಕುಮಾರ್ ಮತ್ತುಆಂದ್ರಪ್ರದೇಶದ ಗೊಳ್ಳಪಲ್ಲಿಯ ನಾಗಲೂರಿರಮಣಯ್ಯ ಬಂಧಿತರು. ಇವರಿಂದ ಗುಡಿಬಂಡೆ ಪೊಲೀಸರು  ಬಂಗಾರದ 4 ತಾಳಿ, ದೇವರ ಬೆಳ್ಳಿಯ ಕವಚ, 3 ಬೆಳ್ಳಿಯ ಕಿರೀಟಗಳು, ಒಂದು ಬೆಳ್ಳಿಯ ತಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಚಿಕ್ಕಬಳ್ಳಾಪುರ ತಾಲೂಕಿನ ಸೊಪ್ಪಹಳ್ಳಿಯ ಶ್ರೀ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ  ಕಳ್ಳತನ ಮಾಡಿದ್ದ 1.70 ಲಕ್ಷ ರೂ  ಮೌಲ್ಯದ ಬಾಲಸುಬ್ರಮಣ್ಯಸ್ವಾಮಿಯ ಬೆಳ್ಳಿಯ ವಿಗ್ರಹ, ನಾಗರ ಹೆಡೆಯ ಬೆಳ್ಳಿಯ ಕವಚ, ಬೆಳ್ಳಿಯ ಕಿರೀಟ ವಶಪಡಿಸಿಕೊಳ್ಳಲಾಗಿದೆ.‌ ಈಗ ಆರೋಪಿಗಳು  ನ್ಯಾಯಂಗ ಬಂಧನದಲ್ಲಿದ್ದಾರೆ.

*ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲು*
ಇನ್ನು ಬಂಧಿತ ಆರೋಪಿಗಳ ವಿರುದ್ಧ ಪಟ್ಟನಾಯಕನಹಳ್ಳಿ ಪೊಲೀಸ್‌ಠಾಣೆ, ಕೊರಟಗೆರೆ ಪೊಲೀಸ್‌ಠಾಣೆ, ಗಾರಲದಿನ್ನೆ ಪೊಲೀಸ್‌ಠಾಣೆ, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಳ್ಳತನ  ದೂರುಗಳು ದಾಖಲಾಗಿವೆ.

*ಸಿಬ್ಬಂದಿ ಕೆಲಸಕ್ಕೆ ಎಸ್ಪಿ ಮೆಚ್ಚುಗೆ*
ದೇಗುಲದಲ್ಲಿ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳು, ಸ್ಥಳದಲ್ಲಿನ
ಸಿಸಿ ಕ್ಯಾಮರಾ ಡಿವಿಆರ್‌ ಅನ್ನು ತೆಗೆದುಕೊಂಡು ಹೋಗಿದ್ದರು. ಇದರ ನಡುವೆಯೂ ಚುರುಕಿನ ಕಾರ್ಯಾಚರಣೆ ಕೈಗೊಂಡು, ಖತರ್ನಾಕ್‌ ಕಳ್ಳರನ್ನು ಗುಡಿಬಂಡೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಪ್ರಕರಣಗಳನ್ನು ಭೇದಿಸಿ, ಮಾಲು ಸಮೇತ ಆರೋಪಿಗಳನ್ನು ಬಂಧಿಸಿರುವ ಸಿಬ್ಬಂದಿ ಕೆಲಸಕ್ಕೆ ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ಕುಶಾಲ್‌ ಚೌಕ್ಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.