ನ್ಯೂಸ್

ಶಸ್ತ್ರಾಸ್ತ್ರ, ಮದ್ದುಗುಂಡುಗಳೊಂದಿಗೆ ಇಬ್ಬರು ಎಲ್‌ಇಟಿ ಹೈಬ್ರಿಡ್ ಭಯೋತ್ಪಾದಕರ ಬಂಧನ| terrorist arrested

ಶೋಪಿಯಾನ್: ಭಾರತ ಹಾಗೂ ಪಾಕಿಸ್ತಾನದ ಉದ್ವಿಗ್ನತೆಯ ನಡುವೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನನ್ನು ಭದ್ರತಾ ಪಡೆ ಎಲ್​ಇಟಿಯ ಇಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಿವೆ. ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಭಯೋತ್ಪಾದಕರಿಂದ 2 ಎಕೆ-56, 4 ಮ್ಯಾಗಜೀನ್‌ಗಳು, 102 ಲೈವ್ ಕಾರ್ಟ್ರಿಡ್ಜ್‌ಗಳು, 2 ಹ್ಯಾಂಡ್ ಗ್ರೆನೇಡ್‌ಗಳು, ನಗದು, ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಬಂಧಿತ ವಿಭಾಗಗಳ ಅಡಿಯಲ್ಲಿ ಭಯೋತ್ಪಾದಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಬೀಳಲಿದೆ.

ಒಂದು ಪ್ರಮುಖ ಕಾರ್ಯಾಚರಣೆಯ ಯಶಸ್ಸಿನಲ್ಲಿ, ನಿರ್ದಿಷ್ಟ ಮಾಹಿತಿಯ ಬಳಿಕ SOG ಶೋಪಿಯಾನ್ 44 RR ಮತ್ತು 178 Bn CRPF ಜೊತೆಗೂಡಿ ಬಸ್ಕುಚಾನ್‌ನಲ್ಲಿ ದಾಳಿಯನ್ನು ಪ್ರಾರಂಭಿಸಿತು. ಪ್ರದೇಶವನ್ನು ಪರಿಣಾಮಕಾರಿಯಾಗಿ ಸುತ್ತುವರಿದು ಮತ್ತು ಹತ್ತಿರದ ಹಣ್ಣಿನ ತೋಟದಲ್ಲಿ ಭಯೋತ್ಪಾದಕರ ಚಲನವಲನವನ್ನು ಗಮನಿಸಲಾಗಿದೆ. ಪಡೆಗಳ ತ್ವರಿತ ಮತ್ತು ಕಾರ್ಯತಂತ್ರದಿಂದಾಗಿ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಯಾರು ಈ ಹೈಬ್ರಿಡ್ ಉಗ್ರರು ?

(ಏಜೆನ್ಸೀಸ್)

ಇವರು ಸದಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯರಾಗದೆ ಸಾಮಾನ್ಯ ಜನರಂತೆ ಸರಳ ಜೀವನವನ್ನೇ ನಡೆಸುತ್ತಿರುತ್ತಾರೆ. ತಮ್ಮ ಸಂಘಟನೆಗಳು ಕರೆದಾಗ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೆ ತಮ್ಮ ಜೀವನಕ್ಕೆ ಮರಳುತ್ತಾರೆ. ಹಾಗೆಯೇ ಅವರು ಶಸ್ತ್ರಾಸ್ತ್ರಗಳನ್ನು ಹಿಡಿದು ನೇರವಾಗಿ ದಾಳಿ ಮಾಡುವ ಬದಲು ಬೇರೆ ಬೇರೆ ತಂತ್ರಗಳನ್ನು ಕೂಡ ಬಳಸುತ್ತಾರೆ. ಅವರು ಜನರಿಂದ ಅಡಗಿಕೊಂಡಿರುವುದಿಲ್ಲ, ಕಚೇರಿ, ವಿದ್ಯಾರ್ಥಿಯಾಗಿ, ವ್ಯಾಪಾರಿಯಾಗಿ ಸಾಮಾನ್ಯರಂತೆಯೇ ಜೀವನ ಸಾಗಿಸುತ್ತಿರುತ್ತಾರೆ.