ಮಾಲೂರು ತಾಲೂಕಿನ ಹಳೆಪಾಳ್ಯ ಗ್ರಾಮದ ಸಮೀತ ಬಂಡೆ ಬಿದ್ದು ಜಖಂಗೊಂಡಿರುವ ಇಟಾಚಿ. 
ನ್ಯೂಸ್

ಅಕ್ರಮವಾಗಿ ಗಣಿ ನಡೆಸುತ್ತಿದ್ದ ಮಾಲೀಕನ ಬಂಧನ

ಕೋಲಾರ: ಅನುಮತಿ ಪಡೆಯದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮಾಲೀಕ ಮಂಜುನಾಥ್​ ಗೌಡ (45) ಎಂಬಾತನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಜಿಲ್ಲೆಯ ಮಾಲೂರು ತಾಲೂಕು ಹಳೆಪಾಳ್ಯ ಸಮೀಪ ಅರಣ್ಯ ಪ್ರದೇಶದಲ್ಲಿ ಮಂಜುನಾಥ್​ ಸ್ಫೋಟಕ ಸಿಡಿಸಿ ಬಂಡೆ ತೆಗೆಯುತ್ತಿದ್ದ,
ಮೃತ ಜೂ.18ರಂದು ಬೆಳಗ್ಗೆ 10.30ಕ್ಕೆ ತಿಂಡಿ ಮುಗಿಸಿಕೊಂಡು ಕೆಲಸಕ್ಕೆ ಹೋಗಿದ್ದ ಪ್ರವಿಣ್​ಕುಮಾರ್​, ಹಿಟಾಚಿ ಮೂಲಕ ಬಂಡೆಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಬಂಡೆ ಕುಸಿದು ಮೃತಪಟ್ಟಿದ್ದರು.
ಗಣಿ ನಡೆಸುತ್ತಿದ್ದ ಮಾಲೀಕ ಹಳೆಪಾಳ್ಯ ಮಂಜುನಾಥಗೌಡ ಬಂಡೆ ಕೆಲಸ ಮಾಡಿಸಲು ಯಾವುದೇ ಇಲಾಖೆಗಳಿಂದ ಅನುಮತಿ ಪಡೆದಿಲ್ಲ. ಜತೆಗೆ ಗ್ರಾಮ ಸಮೀಪದ ಬೆಟ್ಟದಲ್ಲಿ ಅಕ್ರಮವಾಗಿ ಕಲ್ಲು ಕೆಲಸ ಮಾಡಿಸುತ್ತಿದ್ದು, ಕಾರ್ಮಿಕರಿಗಾಗಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ದೊಡ್ಡ ಬಂಡೆ ಬ್ಲಾಸ್ಟ್​ ಮಾಡಿಸಿ ಆ ಕಲ್ಲುಗಳನ್ನು ಹಿಟಾಚಿಯಿಂದ ತೆಗೆಸಿದರೆ ಅನಾಹುತವಾಗಲಿದೆ ಎಂದು ಗೊತ್ತಿದ್ದರೂ ಕೆಲಸ ಮಾಡಿಸಿದ್ದಾರೆ. ಅನಾಹುತಕ್ಕೆ ಕಾರಣವಾದ ಮಂಜುನಾಥ್​ಗೌಡ ವಿರುದ್ಧ ಮಾಸ್ತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಂಡೆಯ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಪ್ರವಿಣ್​ಕುಮಾರ್​ ಮೃತದೇಹವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಅಧಿಕಾರಿಗಳು ಹೊರತೆಗೆದು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆರೋಪಿ ಮಂಜುನಾಥ್​ ಗೌಡನನ್ನು ಪತ್ತೆ ಮಾಡಿ ಬಂಧಿಸಲು ಅಪರ ಪೊಲೀಸ್​ ಅಧೀಕ್ಷಕರಾದ ರವಿಶಂಕರ, ಎಚ್​.ಸಿ ಜಗದೀಶ್​, ಡಿವೈಎಸ್ಪಿ ಎಂ.ಎಚ್​.ನಾಸ್ತೆ ನೇತೃತ್ವದಲ್ಲಿ ಮಾಸ್ತಿ ಠಾಣೆ ಇನ್​ಸ್ಪೆಕ್ಟರ್​ ಬಿ.ಸುನಿಲ್​ಕುಮಾರ್​ ಹಾಗೂ ಸಿಬ್ಬಂದಿ ತಂಡ ರಚಿಸಿಸಲಾಗಿತ್ತು.