ಬೆಂಗಳೂರು: ಅಕ್ರಮವಾಗಿ ಚಿನ್ನದ ಬಿಸ್ಕತ್ ಸಾಗಿಸುತ್ತಿದ್ದ ವ್ಯಕ್ತಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಸೀಮಾ ಸುಂಕ (ಕಸ್ಟಮ್ಸ್) ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ ೬೦೦ ಗ್ರಾಂ ತೂಕದ ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಕೋಲ್ಕತ್ತಾದಿಂದ ಏರ್‌ಏಷ್ಯಾ ವಿಮಾನದಲ್ಲಿ ಕೆಐಎಎಲ್ಗೆ ಬಂದಿದ್ದ ವ್ಯಕ್ತಿಯ ಬ್ಯಾಗ್ ತಪಾಸಣೆ ಮಾಡುತ್ತಿದ್ದಾಗ ೩೦ ಚಿನ್ನದ ಬಿಸ್ಕತ್‌ಗಳು ಸಿಕ್ಕಿವೆ. ಅವುಗಳ ಮೌಲ್ಯ ಸುಮಾರು ೩೬ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪ್ರತಿ ಬಿಸ್ಕತ್ ೨೦ ಗ್ರಾಂ ತೂಕವಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.