ಅಮೇಠಿ: ಯೋಧನ ಗರ್ಭಿಣಿ ಪತ್ನಿಗೆ ಥಳಿಸಿ, ಆತನ ತಂದೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಅಮೇಠಿಯಲ್ಲಿ ನಡೆದಿದೆ.
ಅಮೇಠಿಯ ಸಂಗ್ರಾಮ್ಪುರದ ಥೆಂಗಾಹಾ ಸುಕಲ್ಪುರ್ ಗ್ರಾಮದವಾಗಿರುವ ಸೂರ್ಯ ಪ್ರಕಾಶ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಜಮ್ಮುಮತ್ತು ಕಾಶ್ಮೀರಲ್ಲಿ ವಾಸವಾಗಿದ್ದಾರೆ.
ಅವರ ಕುಟುಂಬವೆಲ್ಲ ಈ ಹಳ್ಳಿಯಲ್ಲೇ ವಾಸವಾಗಿದೆ. ಭೂಮಿಗೆ ಸಂಬಂಧಪಟ್ಟ ವಿವಾದ ಕೊಲೆಗೆ ಕಾರಣವಾಗಿದೆ. ಸೈನಿಕನ ತಂದೆ ರಾಜೇಂದ್ರ ಮಿಶ್ರಾ (55)ರನ್ನು ಹತ್ಯೆ ಮಾಡಲಾಗಿದ್ದು, ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಈಕೆ ಗರ್ಭಿಣಿ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೇಂದ್ರ ಮಿಶ್ರಾರ ಮೃತದೇಹವನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಲಾಗಿದೆ. ಹಾಗೇ ಸೈನಿಕನ ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ಯೆ ಮಾಡಿದ ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಹುಡಿಕಿ ಬಂಧಿಸುವ ಕಾರ್ಯಕ್ಕೆ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.(ಏಜೆನ್ಸೀಸ್)