ಪಂಜಾಬ್ : ಆಪರೇಷನ್ ಸಿಂಧೂರ್ ಸಮಯದಲ್ಲಿ ದೇಶದ ಸೈನಿಕರು ಭಾರತ-ಪಾಕಿಸ್ತಾನ ಗಡಿಯನ್ನು ಕಾಯುತ್ತಿದ್ದಾಗ, ಪಂಜಾಬ್‌ನ ಫಿರೋಜ್‌ಪುರದ ಒಂದು ಸಣ್ಣ ಹಳ್ಳಿಯ 10 ವರ್ಷದ ಬಾಲಕ ಅವರಿಗೆ ಹಾಲು, ಲಸ್ಸಿ ನೀಡುತ್ತಿದ್ದ. ಇದನ್ನು ಮೆಚ್ಚಿದ ಸೇನೆ ಬಾಲಕನಿಗೆ ಸನ್ಮಾನ ಮಾಡಿದೆ.
ಪಂಜಾಬ್‌ನ ತಾರಾ ವಾಲಿ ಗ್ರಾಮದಲ್ಲಿ ಆಪರೇಷನ್ ಸಿಂದೂರ್‌ನ ಸದ್ದು ಇಡೀ ಗ್ರಾಮದಲ್ಲಿ ಪ್ರತಿಧ್ವನಿಸುತ್ತಿತ್ತು. ಈ ಭಯದ ವಾತಾವರಣದ ನಡುವೆಯೂ 10 ವರ್ಷದ ಬಾಲಕ ಶ್ರವಣ್ ಬಿರು ಬಿಸಿಲಿನ ನಡುವೆಯೂ ದೇಶ ಕಾಯುವ ಕಾಯಕದಲ್ಲಿ ತೊಡಗಿದ್ದ ಯೋಧರಿಗೆ ನೀರು ಟೀ, ಲಸ್ಸಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಿದ್ದನು. ಈ ಬಾಲಕನ ಸೇವೆಯನ್ನು ಗುರುತಿಸಿದ ಸೇನೆ ಈಗ ಆ ಬಾಲಕನಿಗೆ ಸನ್ಮಾನ ಮಾಡಿ ಗೌರವಿಸಿದೆ.
ಇದನ್ನೂ ಓದಿ: ಭಾರತದಲ್ಲಿ ವಾಸಿಸುವ 240 ಮಿಲಿಯನ್ ಹೆಮ್ಮೆಯ ಭಾರತೀಯ ಮುಸ್ಲಿಮರು; ಅಸಾದುದ್ದೀನ್ ಓವೈಸಿ| Asaduddin Owaisi
7ನೇ ಪದಾತಿ ದಳದ ವಿಭಾಗದ ಕಮಾಂಡಿಂಗ್ ಜನರಲ್ ಆಫೀಸರ್ ಆಗಿರುವ ಮೇಜರ್ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಅವರು ಶ್ರವಣ್ ಅವರನ್ನು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಶ್ರವಣ್ ತಾನು ಸೇನೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನಗೆ ಭಯವಾಗಲಿಲ್ಲ, ನಾನು ದೊಡ್ಡವನಾದ ಮೇಲೆ ಸೈನಿಕನಾಗಲು ಬಯಸುತ್ತೇನೆ. ಸೈನಿಕರಿಗೆ ನೀರು, ಲಸ್ಸಿ ಮತ್ತು ಐಸ್ ತರುತ್ತಿದ್ದೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಶ್ರವಣ್ ಸಿಂಗ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಈ ವೇಳೆ ಬಾಲಕನಿಗೆ ಸ್ಮರಣಿಕೆ, ವಿಶೇಷ ಊಟ ಮತ್ತು ಅವನ ನೆಚ್ಚಿನ ಐಸ್ ಕ್ರೀಮ್ ಅನ್ನು ಉಡುಗೊರೆಯಾಗಿ ನೀಡಲಾಯಿತು.
ಇದನ್ನೂ ಓದಿ: ಪಿಒಕೆ ಜನರು ನಮ್ಮವರೇ; ಭಾರತಕ್ಕೆ ಮರಳುವ ದಿನ ದೂರವಿಲ್ಲ; ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಸಂದೇಶ| Rajnath Singh
(ಏಜೆನ್ಸೀಸ್)
ಸೈನಿಕರೊಂದಿಗಿನ ತನ್ನ ಮಗನ ಬಾಂಧವ್ಯವನ್ನು ನೋಡಿದರೆ ಅದರ ಮುಂದೆ ಯಾವ ಸುಗ್ಗಿಯೂ ಸರಿಸಾಟಿಯಾಗುವುದಿಲ್ಲ ಎಂದು ಶ್ರವಣ್ ತಂದೆ ರೈತ ಸೋನಾ ಸಿಂಗ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಮ್ಮ ಹೊಲಗಳಲ್ಲಿ ಸೈನ್ಯ ಬೀಡುಬಿಟ್ಟಿತ್ತು. ಮೊದಲ ದಿನದಿಂದಲೇ ಶ್ರವಣ್ ಅವರಿಗೆ ಸಹಾಯ ಮಾಡಲು ಪ್ರಾರಂಭಿಸಿದ ಹಾಲು, ನೀರು, ಲಸ್ಸಿ ಮತ್ತು ಐಸ್ ತೆಗೆದುಕೊಂಡು ಹೋಗಿ ನೀಡುತ್ತಿದ್ದ, ನಾವು ಕೂಡ ಆತನ ಬೆಂಬಲಕ್ಕೆ ನಿಂತಿದ್ದೆವು ಎಂದಿದ್ದಾರೆ.