ನ್ಯೂಸ್

ಅದ್ದೂರಿಯಾಗಿ ನೆರವೇರಿತು ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಎಂಗೇಜ್​ಮೆಂಟ್

ಬೆಂಗಳೂರು: ನಟ ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್‌ ಅವರ ಎಂಗೇಜ್‌ಮೆಂಟ್‌, ಚೆನ್ನೈನಲ್ಲಿ ಶುಕ್ರವಾರ ಅದ್ಧೂರಿಯಾಗಿ ನೆರವೇರಿದೆ. ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಕಾಲಿವುಡ್​ನ ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರನ್ನು ಐಶ್ವರ್ಯಾ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿಯೇ ಐಶ್ವರ್ಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿನ್ನೆ ಚೆನ್ನೈನಲ್ಲಿ ನಡೆದ ಐಶ್ವರ್ಯ ಹಾಗೂ ಉಮಾಪತಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಕೂಡಾ ಉಪಸ್ಥಿತರಿದ್ದರು.

ಐಶ್ವರ್ಯ, ಉಮಾಪತಿ ಎಂಗೇಜ್‌ಮೆಂಟ್‌ ಫೋಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಜೋಡಿಗೆ ನೆಟಿಜನ್ಸ್‌ ಶುಭ ಹಾರೈಸುತ್ತಿದ್ದಾರೆ. ಐಶ್ವರ್ಯ ಹಾಗೂ ಉಮಾಪತಿ ಮದುವೆ ದಿನಾಂಕ ಶೀಘ್ರದಲ್ಲೇ ಅನೌನ್ಸ್‌ ಆಗಲಿದೆ.

ಅರ್ಜುನ್‌ ಸರ್ಜಾ, ತಂಬಿ ರಾಮಯ್ಯ ಹಲವು ವರ್ಷಗಳಿಂದ ಸ್ನೇಹಿತರು. ಜೊತೆಯಾಗಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಈ ಸ್ನೇಹಿತರು ಬೀಗರಾಗಿ ಬದಲಾಗಿದ್ದಾರೆ.

ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ತಮಿಳು ಸಿನಿಮಾವೊಂದರ ಮೂಲಕ ಸಿನಿ ಕೆರಿಯರ್‌ ಆರಂಭಿಸಿದ ಐಶ್ವರ್ಯ 2018ರಲ್ಲಿ ಕನ್ನಡದಲ್ಲಿ ಪ್ರೇಮ ಬರಹ ಸಿನಿಮಾದಲ್ಲಿ ನಟಿಸಿದರು.