ಏರೋಬಿಕ್​ ಜಿಮ್ನಾಸ್ಟಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅರಿಹಾ 
ನ್ಯೂಸ್

ಏರೋಬಿಕ್​ ಜಿಮ್ನಾಸ್ಟಿಕ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅರಿಹಾ

ನವದೆಹಲಿ: ಯುವ ಜಿಮ್ನಾಸ್ಟ್​ ಅರಿಹಾ ಪಂಗಂಬಂ (

Ariha Pangambam

) ಪ್ರತಿಷ್ಠಿತ ಏರೋಬಿಕ್​ ಜಿಮ್ನಾಸ್ಟಿಕ್ಸ್​ ಏಷ್ಯನ್​ ಚಾಂಪಿಯನ್​ಷಿಪ್​ನಲ್ಲಿ (

Asian aerobic gymnastics

) ಚಿನ್ನದ ಪದಕ ಗೆದ್ದ ಮೊದಲ ಭಾರತೀಯರೆನಿಸಿದ್ದಾರೆ. ಅವರು ಸೀನಿಯರ್​ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.


ಫಿಲಿಪ್ಪಿನ್ಸ್​ನಲ್ಲಿ ನಡೆದ ಕೂಟದಲ್ಲಿ ಮಣಿಪುರದ ಅರಿಹಾ ಫೈನಲ್​ ಸ್ಪರ್ಧೆಯಲ್ಲಿ 19.100 ಅಂಕ ಗಳಿಸಿ ಅಗ್ರಸ್ಥಾನ ಪಡೆದರು. ಅವರು ಕಲಾತ್ಮಕತೆಗೆ 8.650, ಕಾರ್ಯರೂಪತೆಗೆ 7.600 ಮತ್ತು ಬಿರುಸುತನಕ್ಕೆ 2.850 ಅಂಕ ಗಳಿಸಿದರು.