ನ್ಯೂಸ್

ನಿಮ್ಮ ಮಕ್ಕಳಲ್ಲಿ ದಡಾರ ಲಕ್ಷಣಗಳು ಕಾಣುತ್ತಿವೆಯೇ?ಹಾಗಿದ್ದರೆ ಮನೆಯಲ್ಲಿಯೇ ಈ ರೀತಿ ಆರೈಕೆ ಮಾಡಿ| Measles

Measles: ನಿಮ್ಮ ಮನೆಯಲ್ಲಿ ನೀವು ಅಥವಾ ನಿಮ್ಮ ಮಗು ದಡಾರದಿಂದ ಬಳಲುತ್ತಿದ್ದೀರಾ? ಈ ಸೋಂಕು ನಿಮಗೆ ಕಷ್ಟ ಅನಿಸುತ್ತಿದ್ದೀಯ ಹಾಗಿದ್ದರೆ, ಮನೆಯಲ್ಲಿಯೇ ಸರಿಯಾದ ಆರೈಕೆಯೊಂದಿಗೆ ಈ ಸೋಂಕಿನಿಂದ ಪಾರಾಗಬಹುದು. ಆರಂಭಿಕವಾಗಿ ದಡಾರವು ದದ್ದು, ಜ್ವರ, ಕೆಮ್ಮು ಅಥವಾ ಕಣ್ಣುಗಳಲ್ಲಿ ನೀರು ಬರುವಂತಹ ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಆದರಿಂದ ನಿರ್ಲಕ್ಷ್ಯ ವಹಿಸದೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು.

ದಡಾರವು ಅತ್ಯಂತ ಸಾಂಕ್ರಾಮಿಕ ರೋಗವಾಗಿರುವುದರಿಂದ ಇತರರಿಗೆ ಸೋಂಕು ಬಹಳ ಬೇಗ ಹರಡುತ್ತದೆ. ಆದರಿಂದ ಸೋಂಕು ತಗುಲದಂತೆ ಕ್ರಮ ವಹಿಸಬೇಕು. ಹೆಚ್ಚಿನ ಜನರು ಸೋಂಕಿಗೆ ಒಳಗಾದ 7-14 ದಿನಗಳ ನಂತರ ರೋಗಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತಾರೆ. ಇದು ಸಾಮಾನ್ಯವಾಗಿ ತೀವ್ರ ಜ್ವರ, ಮೂಗು ಸ್ರವಿಸುವುದು, ಕಣ್ಣು ಕೆಂಪಾಗುವುದು, ಹಾಗೂ ಒಣ ಕೆಮ್ಮಿನಿಂದ ಪ್ರಾರಂಭವಾಗುತ್ತದೆ.

ನಿಮ್ಮ ಅಂತರವನ್ನು ಕಾಯ್ದುಕೊಳ್ಳಿ

ದಡಾರ ದೃಢಪಟ್ಟ ನಂತರ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ವಿಶೇಷವಾಗಿ, ನವಜಾತ ಶಿಶುಗಳು, ಗರ್ಭೀಣಿಯವರಿಂದ ದೂರ ಇರಬೇಕಾಗುತ್ತದೆ. ದದ್ದು ಕಾಣಿಸಿಕೊಂಡ ನಂತರ ಕನಿಷ್ಟ 4 ದಿನಗಳವರೆಗಾದರೂ ಪ್ರತ್ಯೇಕವಾಗಿರಬೇಕು. ಗಾಳಿಯಲ್ಲಿ ಹೋಗುವುದನ್ನು ನಿಷೇಧಿಸಬೇಕಾಗುತ್ತದೆ.

ಆರೋಗ್ಯದ ಮೇಲೆ ಎಚ್ಚರವಹಿಸಿ

ಹೆಚ್ಚಿನ ಜನರು ದಡಾರದಿಂದ ಬಳಲಿದ ನಂತರ, ಒಂದೆರಡು ವಾರಗಳಲ್ಲಿ ಚೇತರಿಕೆ ಹೊಂದಿದ್ದರೂ, ಕೆಲವೊಮ್ಮೆ ಇವು ಮತ್ತೆ ಮರುಕಳಿಸಿ ಬರಬಹುದು. ನಿಮ್ಮ ಮಗುವಿಗೆ ಉಸಿರಾಟದ ತೊಂದರೆಯಾಗುತ್ತಿದ್ದರೆ, ಅತಿಯಾಗಿ ನಿದ್ರಿಸುತ್ತಿದ್ದರೆ, ನಿರಂತರ ಕಿವಿ ನೋವು, ವಾಂತಿ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

ಸೋಂಕಿತ ವ್ಯಕ್ತಿಯು ಕೋಣೆಯಿಂದ ಹೊರಬಂದ ನಂತರ ದಡಾರವು ಎರಡು ಗಂಟೆಗಳ ಕಾಲ ಗಾಳಿಯಲ್ಲಿ ಉಳಿಯುತ್ತದೆ. ಅಂದರೆ ಸಾಂದರ್ಭಿಕ ಸಂಪರ್ಕದಿಂದಲೂ ಅದು ಹರಡಬಹುದು. ಸಾಧ್ಯವಾದಷ್ಟು ರೋಗಿಯನ್ನು ಪ್ರತ್ಯೇಕವಾಗಿಡುವುದು ಉತ್ತಮ.

ದಡಾರದಿಂದ ರಕ್ಷಿಸಲು ಉತ್ತಮ ಮಾರ್ಗವೆಂದರೆ ಎಂಎಂಆರ್​ ಲಸಿಕೆ ಪಡೆಯುವುದು. ಈ ಲಸಿಕೆಯಿಂದ ದಡಾರ, ರುಬೆಲ್ಲಾ ಇಂತಹ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

ದಡಾರ ನಿಯಂತ್ರಣಕ್ಕೆ 2 ಲಸಿಕೆಗಳನ್ನು ನೀಡಲಾಗುತ್ತದೆ. ಮೊದಲನೆಯದು 12–15 ತಿಂಗಳುಗಳಲ್ಲಿ ಮತ್ತು ಎರಡನೆಯದು 4ರಿಂದ 6 ವರ್ಷ ವಯಸ್ಸಿನ ನಡುವೆ ನೀಡಲಾಗುತ್ತದೆ.

ದಡಾರವು ಗಂಭೀರ ಕಾಯಿಲೆಯಾಗಿದ್ದು, ಸರಿಯಾದ ಕ್ರಮಗಳೊಂದಿಗೆ ಮನೆಯಲ್ಲಿಯೇ ಸುರಕ್ಷಿತವಾಗಿ ನಿರ್ವಹಿಸಬಹುದು. ಆದಷ್ಟು ಸೋಂಕಿತರು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಹಾಗೂ ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಸೋಂಕನ್ನು ತಡೆಯಬಹುದು. ಹಾಗೆಯೇ ಇನ್ನಿತರ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ, ಈ ಸೋಂಕಿನಿಂದ ದೂರ ಉಳಿಯಬಹುದು.(ಏಜೆನ್ಸೀಸ್​)