Your Ex: ನಿಮ್ಮ ಮಾಜಿ ಪ್ರಿಯಕರ/ಪ್ರಿಯತಮೆ ಜೊತೆ ಮತ್ತೆ ಮಿಂಗಲ್ ಆಗಲು ಬಯಸುತ್ತಿದ್ದಿರಾ?. ಒಂದು ವೇಳೆ ಈ ಯೋಚನೆ ನಿಮಗಿದ್ದರೆ ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನಿಮ್ಮ ನಿರ್ಧಾರ ಸರಿ ಇದಿಯೇ ಅಥವಾ ಇಲ್ಲವೇ ಎಂಬವುದನ್ನು ಮೊದಲು ತಿಳಿಯಿರಿ.
ಇದನ್ನೂ ಓದಿ:ಕಾಳಿಂಗ ಸರ್ಪವೇ, ನಾಗರಹಾವೇ ಯಾವುದು ಹೆಚ್ಚು ಅಪಾಯಕಾರಿ?; ಭಾರತೀಯ ವಿಷಕಾರಿ ಹಾವಿನ ಬಗ್ಗೆ ತಿಳಿಯಿರಿ | Python Cobra
ಹೌದು, ಪ್ರಮಾಣಿಕವಾಗಿ ಹೇಳಬೇಕಂದ್ರೆ, ನಿಮ್ಮ ಮಾಜಿ ಸಂಗಾತಿಯನ್ನು ದೂರ ಮಾಡಿರುವುದು ಅಥವಾ ಅವರೇ ನಿಮ್ಮಿಂದ ದೂರು ಸರಿದಿರುವುದರ ಹಿಂದೆ ಒಂದು ಬಲವಾದ ಕಾರಣವಿರುತ್ತದೆ. ಅಲ್ಲದೆ, ಅ ವ್ಯಕ್ತಿಯ ಬಗ್ಗೆ ನಿಮಗೆ ಮೊದಲೆ ತಿಳಿದಿರಿವುದರಿಂದ ಮತ್ತೆ ಹೊಸ ಸಂಬಂಧ ಬೆಳಸುವುದು ಕಷ್ಟಸಾಧ್ಯವಾಗಲಿದೆ. ಆದರೆ, ಕೆಲ ಸಮಯದ ಬಳಿಕ ಮಾಜಿ ಸಂಗಾತಿಯೊಂದಿಗೆ ಮತ್ತೆ ಬೆರೆಯಲು ಸಾಮಾನ್ಯವಾಗಿ ಯೋಚಿಸಿರಬಹುದು. ಒಂದು ವೇಳೆ ಇದೇ ದೃಢವಾಗಿದ್ದರೆ, ಕೆಲ ಸಂಗತಿಗಳನ್ನು ಯೋಚಿಸುವುದು ಒಳಿತು.
ಸಾಮಾನ್ಯವಾಗಿ ದೃಢ ಪ್ರೀತಿ ಎಂದಿಗೂ ಬಿಟ್ಟು ಹೋಗಲು ಸಾಧ್ಯವಿಲ್ಲ. ಆದರೆ, ಅದಕ್ಕೂ ಮೀರಿ ನಡೆದ ಕೆಲ ಘಟಮೆಯಿಂದ ಇಬ್ಬರ ನಡುವೆ ಬ್ರೇಕಪ್ಗಳು ಆಗಿರುತ್ತದೆ. ಹೀಗಾಗಿ, ಮೊದಲ ತಪ್ಪು ಏನು ಎಂಬುವುದನ್ನು ಅರಿಯಿರಿ. ಇಲ್ಲವಾದರೆ ಇದು ಮತ್ತೊಮ್ಮೆ ಮರುಕಳಿಸಬಹುದು.
ಹಿಂದಿನ ಲವ್ ಅನ್ನು ಮರುಕಳಿಸುವುದು ರೋಮಂಚನವಾಗಿರುತ್ತದೆ. ಆದರೆ, ಇದು ನಾವು ಅಂದುಕೊಂಡಷ್ಟು ಸುಲಭವಲ್ಲ. ಈ ನಿರ್ಧಾರ ತಗೆದುಕೊಳ್ಳುವ ಮೊದಲು ಇದು ನಿಮ್ಮರಿಗೂ ಬದುಕಲು ನಿಜವಾದ ಮಾರ್ಗವೇ ಎಂಬ ಯೋಚನೆ ಅತ್ಯಗತ್ಯ. ಒಂದು ವೇಳೆ ಯೋಚನೆ ಇದ್ರೆ ಎಚ್ಚರಿಕೆಯ ಹೆಜ್ಜೆ ಅಗತ್ಯ.
ಕಳೆದ ಹೊದ ವ್ಯಕ್ತಿಯೊಂದಿಗೆ ಮತ್ತೆ ಸೇರುವುದು ಸಲ್ಪ ಕಷ್ಟ. ಆದರೆ, ಕಳೆದು ಕೊಳ್ಳು ಭಯ ನಿಮ್ಮಲ್ಲಿದ್ದರೆ ಅತನ/ಅವಳ ಭಾವನೆಗಳನ್ನು ಮತ್ತೊಮ್ಮೆ ಅರೆತುಕೊಳ್ಳುವುದು ಸೂಕ್ತ. ಏಕೆಂದರೆ ಭಾವನೆಗಳೊಂದಿಗೆ ಆಟವಾಡದೆ ಸಂಗಾತಿಯನ್ನು ಇಡಿದಿಟ್ಟುಕೊಳ್ಳಬಹುದು.
ನೀವು ಮತ್ತು ನಿಮ್ಮ ಸಂಗಾತಿ ಬೇರೆಯಾಗಲು ಕಾರಣವಾದ ಸಮಸ್ಯೆಯ ವಿಷಯದಲ್ಲಿ ಬದಲಾಗಿದ್ದೀರಾ ಎಂದು ನಿಮ್ಮನ್ನು ಕೇಳಿಕೊಳ್ಳಿ. ಸಮಯ ದೂರವಾಗುವುದು ಬೆಳವಣಿಗೆಗೆ ಕಾರಣವಾಗಬಹುದು. ಆದರೆ ಅದು ಸಾಕಾಗಿದೆಯೇ? ಅದೇ ಸಮಸ್ಯೆ ಮುಂದುವರಿದರೆ, ಮತ್ತೆ ಒಟ್ಟಿಗೆ ಸೇರುವುದು ಉತ್ತಮ ಉಪಾಯವಲ್ಲದಿರಬಹುದು. ನೀವಿಬ್ಬರೂ ಏನು ತಪ್ಪಾಗಿದೆ ಎಂಬುದನ್ನು ಅರಿತುಕೊಂಡು ಅದನ್ನು ಮೀರಿ ಬೆಳೆದರೆ ಮಾತ್ರ ಬೆಳಕಿನ ಭರವಸೆ ಇರುತ್ತದೆ.(ಏಜೆನ್ಸೀಸ್)