ನ್ಯೂಸ್

ಮಾವಿನ ಹಣ್ಣನ್ನು ಫ್ರಿಡ್ಜ್​ನಲ್ಲಿಟ್ಟು ತಿನ್ನುತ್ತೀರಾ? ಹಾಗಿದ್ರೆ ಈ ಮಾಹಿತಿ ನೀವು ತಿಳಿದುಕೊಳ್ಳಲೇಬೇಕು...

ಬೆಂಗಳೂರು:  ಹಣ್ಣುಗಳ ರಾಜ ಮಾನಿಹಣ್ಣು. ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ. ಮಾವು ಯಾವಾಗ ಮಾರುಕಟ್ಟೆಗೆ ಬರುತ್ತದೋ ಎಂದು ಕಾಯುತ್ತಿರುತ್ತಾರೆ. ಬೇಸಿಗೆ ಎಂದರೆ ಅನೇಕರಿಗೆ ನೆನಪಾಗುವುದು ಮಾವಿನ ಹಣ್ಣು. ಅನೇಕರು ಮಾವಿನ ಹಣ್ಣನ್ನು ಒಂದೇ ಬಾರಿಗೆ ಖರೀದಿಸಿ ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಆದ್ರೆ ನಾವು ಹೀಗೆ ಫ್ರಿಡ್ಜ್​ನಲ್ಲಿ ಸಂಗ್ರಹಿಸಿಟ್ಟು ತಿನ್ನಬಹುದಾ? ಎನ್ನುವ ಮಾಹಿತಿ ನಿಮಗಾಗಿ..

ಮಾವಿನ ಹಲ್ಲುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು, ದೀರ್ಘಕಾಲ ಇಡಬಾರದು. ಫ್ರಿಡ್ಜ್‌ನಲ್ಲಿ ದೀರ್ಘಕಾಲ ಇಡುವುದರಿಂದ ಮಾವಿನ ಹಣ್ಣಿನ ಪೌಷ್ಟಿಕಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ದೇಹಕ್ಕೆ ಪೋಷಕಾಂಶಗಳು ಸರಿಯಾಗಿ ತಲುಪುವುದಿಲ್ಲ. ಮಾವಿನಹಣ್ಣು ತಿಂದರೆ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

ಮಾವಿನ ಹಣ್ಣನ್ನು ಫ್ರಿಡ್ಜ್ ನಲ್ಲಿ ಸ್ವಲ್ಪ ದಿನ ಇಡಬೇಕೆಂದಿದ್ದರೆ.. ಸಿಪ್ಪೆ ತೆಗೆದು ಮುಚ್ಚಿದ ಪಾತ್ರೆಗಳಲ್ಲಿ ಸಂಗ್ರಹಿಸಿ. ಇದನ್ನು ಒಂದು ಅಥವಾ ಎರಡು ತಿಂಗಳು ಇಡಬಹುದು.

ಮಾವಿನ ಹಣ್ಣನ್ನು ತಾಜಾವಾಗಿಡಲು ಮತ್ತು ಬೇಗನೆ ಕೆಡದಂತೆ ನೀರಿನಲ್ಲಿ ಶೇಖರಿಸಿಡಬೇಕು. ಪಾತ್ರೆಯಲ್ಲಿ ಇಡುವುದರಿಂದ ಮಾವು ಕೊಳೆಯುವುದಿಲ್ಲ..

ಮಾವಿನಹಣ್ಣನ್ನು ಖರೀದಿಸುವ ಮುನ್ನ ಎಲ್ಲಾ ಹಣ್ಣುಗಳನ್ನು ಮಾಗಿದ ಹಣ್ಣಗಳನ್ನು  ತೆಗೆದುಕೊಳ್ಳಬಾರದು ಸ್ವಲ್ಪ ಕಾಯಿ ಇದ್ದರೆ ಎರಡರಿಂದ ಮೂರು ರಿನ ಇಟ್ಟು ತಿನ್ನಬಹುದು.

ಒಣ ಹುಲ್ಲು ಸಿಕ್ಕರೆ.. ಅದಕ್ಕೆ ಮಾವಿನಕಾಯಿ ಹಾಕುವುದು ತುಂಬಾ ಒಳ್ಳೆಯದು. ಹಣ್ಣಿನ ವ್ಯಪಾರಿಗಳು ಹೀಗೆ ಹಣ್ಣನ್ನು ಸಂಗ್ರಹ ಮಾಡುತ್ತಾರೆ.