ನ್ಯೂಸ್

ರಾಜ್ಯದಲ್ಲಿ ಮಾಲ್‌ಗಳೂ ಓಪನ್ ಆಗ್ತಾವಾ? ಸಿಎಂ ಏನು ಹೇಳಿದರು?

ಬೆಂಗಳೂರು: ರಾಜ್ಯದಲ್ಲಿರುವ ಶಾಪಿಂಗ್ ಮಾಲ್‌ಗಳ ಮಾಲೀಕರು ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ತಮಗೂ ವ್ಯವಹಾರ ಆರಂಭಿಸಲು ಅವಕಾಶ ಕಲ್ಪಿಸುವಂತೆ ಒತ್ತಡ ಹೇರಿದರು.

‘‘ಮಾಲ್‌ಗಳನ್ನು ಆಗಾಗ ಸ್ಯಾನಿಟೈಸ್ ಮಾಡುತ್ತೇವೆ, ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತೇವೆ. ಜನದಟ್ಟಣೆ ಆಗದಂತೆ ಎಚ್ಚರ ವಹಿಸುತ್ತೇವೆ’’ ಎಂದು ಮಾಲ್‌ಗಳ ಮಾಲೀಕರು ಮನವೊಲಿಸುವ ಪ್ರಯತ್ನ ಮಾಡಿದರು.

ಈ ಕುರಿತು ಅಲ್ಲೇ ಇದ್ದ ಕೆಲವು ಅಧಿಕಾರಿಗಳ ಅಭಿಪ್ರಾಯವನ್ನೂ ಪಡೆದ ಯಡಿಯೂರಪ್ಪ ಅವರು, ಸದ್ಯಕ್ಕೆ ಮಾಲ್‌ಗಳನ್ನು ತೆರೆಯುವುದು ಬೇಡ ಎಂದು ಸೂಚಿಸಿದರು.

‘ಕೇಂದ್ರ ಸರ್ಕಾರದಿಂದ ಈ ತಿಂಗಳ ಅಂತ್ಯಕ್ಕೆ ಯಾವ ರೀತಿಯ ಮಾರ್ಗಸೂಚಿ ಬರುತ್ತದೆ ಎಂಬುದನ್ನು ನೋಡಿಕೊಂಡು ನಿರ್ಧಾರ ಮಾಡೋಣ’’ ಎಂದು ತಿಳಿಸಿದರು ಎನ್ನಲಾಗಿದೆ.