ಮುಂಬೈ: ಬಾಲಿವುಡ್ನ ಫೇಮಸ್ ಕಾಮಿಡಿ ಶೋವೊಂದರಲ್ಲಿ ನಟಿ ಅರ್ಚನಾ ಪುರಾನ್ ಸಿಂಗ್(Archana Puran Singh) ತೀರ್ಪುಗಾರರಾಗಿರುವುದು ಗೊತ್ತೆ ಇದೆ. ಈ ಕಾರ್ಯಕ್ರಮದಲ್ಲಿ ಅರ್ಚನಾ ಪುರಾನ್ ಅವರು ಒಂದು ಕಾಲದ ಬಾಲಿವುಡ್ ದಿವಾ ನಟಿ ರೇಖಾ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಾಗೂ ಒಮ್ಮೆ ರೇಖಾ ಅವರನ್ನು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನಗೆ ಸಿಕ್ಕಂತಹ ವಿಭಿನ್ನ ಉತ್ತರದ ಬಗ್ಗೆಯೂ ಹೇಳಿದ್ದಾರೆ.
ಇದನ್ನು ಓದಿ: ಇನ್ಮುಂದೆ ಯಾವುದೇ ಸಿನಿಮಾದ ಬೆನಿಫಿಟ್ ಶೋಗೆ ಅವಕಾಶವಿಲ್ಲ; ಸರ್ಕಾರದ ಈ ತೀರ್ಮಾನದ ಹಿಂದಿನ ಕಾರಣ ಹೀಗಿದೆ.. | Telangana
1989ರಲ್ಲಿ ಲಡಾಯಿ ಸಿನಿಮಾದಲ್ಲಿ ನಟಿ ರೇಖಾ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇದರಿಂದ ನನ್ನ ಕನಸು ನನಸಾಯಿತು ಎಂದು ಅರ್ಚನಾ ತಿಳಿಸಿದ್ದಾರೆ. 35 ವರ್ಷಗಳ ನಂತರ ರೇಖಾ ಮತ್ತು ಅರ್ಚನಾ ಕಾಮಿಡಿ ಶೋ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಬಳಿಕ ಅರ್ಚನಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕನಸುಗಳು ಹೇಗೆ ನನಸಾಗುತ್ತವೆ ಎಂಬುದರ ಕುರಿತು ಸುದೀರ್ಘ ಟಿಪ್ಪಣಿಯೊಂದನ್ನು ಬರೆದಿದ್ದಾರೆ.
ಇದೇ ಸಮಯದಲ್ಲಿ ಅರ್ಚನಾ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ರೇಖಾ ಜಿಯವರ ಸಾವನ್ ಭಾಡೋನ್ವನ್ನು ವೀಕ್ಷಿಸಿದಾಗ ಸಣ್ಣ ಪಟ್ಟಣದಲ್ಲಿ ವಾಸಿಸುತ್ತಿದ್ದ ಚಿಕ್ಕ ಹುಡುಗಿ ನಾನು. ಮುಂಬೈಗೆ ಹೋಗುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಅಲ್ಲದೆ ಖಂಡಿತವಾಗಿಯೂ ರೇಖಾ ಅವರನ್ನು ಭೇಟಿಯಾಗಲು ಯಾವುದೇ ನಿರೀಕ್ಷೆ ಇರಲಿಲ್ಲ ಎಂದು ಹೇಳಿದ್ದಾರೆ
ಆದರೆ ಅಂತಿಮವಾಗಿ ತಮ್ಮ ಐಕಾನ್ನೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುವ ದಿನ ಬಂದಿತು. ವರ್ಷಗಳ ನಂತರ ನಾನು ಅವರೊಂದಿಗೆ ಲಡಾಯಿಯಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಅವರು ನನ್ನನ್ನು ಅವರ ಮೇಕಪ್ ರೂಮ್ಗೆ ಕರೆದರು.ಮೇಕಪ್ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದರು. ನಕಲಿ ಕಣ್ಣಿನರೆಪ್ಪೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ಹೇಳಿದರು. ಬಾಲಿವುಡ್ನಲ್ಲಿ ಈ ಟ್ರೆಂಡ್ ಪ್ರಾರಂಭಿಸಿದ್ದು ಅವರೇ ಎಂದು ತಿಳಿಸಿದರು.
ಫಿಲಂ ಸಿಟಿ ಲಾನ್‌ನಲ್ಲಿ ಈ ಬಗ್ಗೆ ಮಾತನಾಡುವಾಗ ನಮಗೆ ಸಾಕಷ್ಟು ನೆನಪುಗಳಿವೆ. ನಾನು ಫಿಲ್ಮ್‌ಸಿಟಿ ಲಾನ್‌ನಲ್ಲಿ ಕುಳಿತು ಈ ಬಗ್ಗೆ ಮಾತನಾಡಿದ್ದು ನೆನಪಿದೆ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಕೇಳಿದಾಗ, ಅವರು ಯಾರೆಂದು ನಿಮಗೆ ತಿಳಿದಿಲ್ಲವೇ? ಎಂದು ರೇಖಾ ಅವರು ಹೇಳಿದರು.(ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಡುವಿನ ಹೆಚ್ಚು ಚರ್ಚಿತ ಸಂಬಂಧವನ್ನು ಇಲ್ಲಿ ಉಲ್ಲೇಖಿಸಿದ್ದಾರೆ.) ಎಂದರು.
ತಮ್ಮ ಪೋಸ್ಟ್ನಲ್ಲಿ ಅರ್ಚನಾ ಅವರು ಸಣ್ಣ ಪಟ್ಟಣಗಳಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ದೊಡ್ಡ ಕನಸು ಕಾಣಲು ಮತ್ತು ಅವುಗಳನ್ನು ಅನುಸರಿಸಲು ಪ್ರೋತ್ಸಾಹಿಸುತ್ತಿರುವುದು ಕಂಡುಬಂದಿದೆ.(ಏಜೆನ್ಸೀಸ್)