ನ್ಯೂಸ್

ತೆನೆ ಇಳಿಸಿ ಕೈ ಹಿಡಿಯಲು ಒಪ್ಪಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ!?

ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಬರಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಲಿಂಗೇಗೌಡರನ್ನು ಕಾಂಗ್ರೆಸ್​ಗೆ ಸೆಳೆಯುವಲ್ಲಿ‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಸುರ್ಜೆವಾಲ ಯಶಸ್ವಿಯಾಗಿದ್ದಾರೆ.

ಜೆಡಿಎಸ್ ಬಿಟ್ಟು‌ ಕಾಂಗ್ರೆಸ್ ಸೇರಲು ಶಿವಲಿಂಗೇಗೌಡರು ಮೀನಮೇಷ ಎಣಿಸುತ್ತಿದ್ದರು. ಸಿದ್ದರಾಮಯ್ಯ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಕೊನೆಗೂ ತೆನೆ ಇಳಿಸಿ, ಹಸ್ತ ಹಿಡಿಯಲು ಶಿವಲಿಂಗೇಗೌಡ ಒಪ್ಪಿಗೆ ಸೂಚಿಸಿದ್ದಾರೆ. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಆಪರೇಷನ್ ಕಾಂಗ್ರೆಸ್​ ಈಗ ಸಕ್ಸಸ್ ಆಗಿದೆ ಎಂದು ಎನ್ನಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭ ಅಂದ್ರೆ 2022ರ ಜನವರಿ ಅಂತ್ಯ ಅಥವಾ ಪೆಬ್ರವರಿಯಲ್ಲಿ ಶಿವಲಿಂಗೇಗೌಡರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಅಂತೆ.