ಮುಂಬೈ: ವರ್ಷದ ಕೊನೆ ತಿಂಗಳ ಕ್ರಿಸ್‌ಮಸ್ ಹಬ್ಬದಂದು ಭಾರತೀಯ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳು ಸಿನಿಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲು ರಿಲೀಸ್ ದಿನಾಂಕದೊಂದಿಗೆ ಈಗಾಗಲೇ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಈ ನಡುವೆ ಡಿ.22 ರಂದು ಶಾರೂಖ್ ಖಾನ್ ಅಭಿನಯದ 'ಡಂಕಿ' ಹಾಗೂ ಪ್ರಭಾಸ್ ನಟನೆಯ 'ಸಲಾರ್' ದಿನವೇ ಮತ್ತೊಂದು ಹಾಲಿವುಡ್ ಸಿನಿಮಾ ಬಿಡುಗಡೆಗೊಳ್ಳಲು ಸಜ್ಜಾಗಿದೆ.
ಇದನ್ನೂ ಓದಿ: ಜೂನ್ನಿಂದ 2,909 ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಿದ ನಾಗಾಲ್ಯಾಂಡ್!; ಎರಡು ದಶಕಗಳಲ್ಲಿ ಇದೇ ಅತಿ ಹೆಚ್ಚು
ಪ್ರಭಾಸ್‌ನ 'ಸಲಾರ್' ಮತ್ತು ಶಾರುಖ್ ಖಾನ್ ಅವರ 'ಡಂಕಿ' ಸಿನಿಮಾಗಳು ತಮ್ಮ ಜಾಗತಿಕ ರಿಲೀಸ್ ಡೇಟ್ ಅನ್ನು ಸದ್ಯ ಅಧಿಕೃತಗೊಳಿಸಿದೆ. ಇದರ ಬೆನ್ನಲ್ಲೇ ಹಾಲಿವುಡ್ನ 'ಅಕ್ವಾಮನ್ ಅಂಡ್ ದಿ ಲಾಸ್ಟ್ ಕಿಂಗ್ಡಮ್' ಈ ಎರಡು ಚಿತ್ರದೊಂದಿಗೆ ರಿಲೀಸ್ ಆಗುವ ಮುಖೇನ ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ಕೊಡಲು ರೆಡಿಯಾಗಿದೆ. ಆರಂಭದಲ್ಲಿ ಡಿಸೆಂಬರ್ 20 ರಂದು ಥಿಯೇಟರ್‌ಗಳಿಗೆ ಬರಬೇಕಿದ್ದ ಆಕ್ವಾಮ್ಯಾನ್, ಇದೀಗ ಡಿಸೆಂಬರ್ 22ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.
ಅಮೆರಿಕಾದಲ್ಲಿ ಇದರ ಪರಿಣಾಮವು ಸ್ವಲ್ಪ ಹೆಚ್ಚಾಗಿರಬಹುದು. ಕಾರಣ ಭಾರತೀಯ ಚಲನಚಿತ್ರಗಳಿಗೆ ಆದಾಯದ ಪ್ರಮುಖ ಭಾಗವು ಈ ಪ್ರದೇಶದಿಂದ ಬರುತ್ತದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶಿಸುತ್ತಿರುವ ಶಾರೂಖ್ ಖಾನ್ ಅಭಿನಯದ ಡಂಕಿ ಮತ್ತು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ ಸಲಾರ್ ಯುಎಸ್ ಬಾಕ್ಸ್ ಆಫೀಸ್ನಲ್ಲಿ ಹೆಚ್ಚಿನ ಗಳಿಕೆ ಕಾಣುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.
'ಸಲಾರ್' ಹಾಗೂ 'ಡಂಕಿ' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವ ಬಗ್ಗೆ ನೆಟ್ಟಿಗರು ಅಭಿಪ್ರಾಯಿಸಿದ್ದು, ಎರಡರಲ್ಲಿ ಯಾವುದಾದರೂ ಒಂದು ಸಿನಿಮಾ ಒಂದು ವಾರ ಹಿಂದೆ ಅಥವಾ ಒಂದು ವಾರ ಮುಂದೆ ತಮ್ಮ ರಿಲೀಸ್ ದಿನಾಂಕದಲ್ಲಿ ಬದಲಾವಣೆ ಮಾಡಿಕೊಂಡರೆ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).