ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ 2025ರಲ್ಲಿ ನಡೆಸುವ ಯುಜಿಸಿಇಟಿ, ಪಿಜಿಸಿಇಟಿ, ಡಿಸಿಇಟಿ ಸೇರಿ ಐದು ಪರೀಕ್ಷೆಗಳ ವೇಳಾಪಟ್ಟಿಯನ್ನು ಇದೇ ಮೊದಲ ಬಾರಿಗೆ ಪ್ರಕಟಿಸಿದೆ.
2024-25ನೇ ಸಾಲಿನ ಇಂಜಿನಿಯರಿಂಗ್, ಪಶುವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಏ.16 ಮತ್ತು 17ರಂದು ಸಿಇಟಿ ನಡೆಸಲಿದೆ. ಸಿಇಟಿಗೆ ಜ.23ರಿಂದ ಫೆ.21ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಗುರುವಾರ ಪ್ರಕಟಿಸಿದರು.
ಏ.16ರಂದು ಬೆಳಿಗ್ಗೆ 10.30ರಿಂದ ಭೌತಶಾಸ ಮತ್ತು ಮಧ್ಯಾಹ್ನ 2.30ರಿಂದ ರಾಸಾಯನಶಾಸ ಹಾಗೂ ಏ.17ರಂದು ಬೆಳಿಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಏ.18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳಿಗೂ ಅರ್ಜಿ:
ಸಿಇಟಿ-2025ರ ಅರ್ಜಿಯು ಎಲ್ಲಾ ಕೋರ್ಸುಗಳಿಗೆ ಸಾಮಾನ್ಯ ಅರ್ಜಿಯಾಗಿರುವುದರಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪ್ರವೇಶಾತಿಗೂ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
- ಅರ್ಜಿ ಸಲ್ಲಿಸಲು ವಿಶೇಷ ಭದ್ರತೆ:
- ಭದ್ರತೆಯ ದೃಷ್ಟಿಯಿಂದ ಸಿಇಟಿ ಅರ್ಜಿ ಭರ್ತಿ ಮಾಡುವ ಮತ್ತು ದಾಖಲೆಗಳ ಪರಿಶೀಲನೆ ವಿಷಯದಲ್ಲಿ ಈ ಬಾರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಹಂತದಲ್ಲಿ ಪ್ರಮಾಣಿಕರಿಸಿಯೇ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಿಂದ ಅಕ್ರಮಗಳಿಗೆ ಬ್ರೇಕ್ ಹಾಕಿದಂತಾಗಲಿದೆ ಎಂದು ಅವರು ವಿವರಿಸಿದ್ದಾರೆ.
- - ಲಾಗಿನ್ ವೇಳೆ ಅಭ್ಯರ್ಥಿಗಳು ನಮೂದಿಸುವ ಮೊಬೈಲ್ ಸಂಖ್ಯೆಗೆ ಒಟಿಪಿ ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ಯಾವುದೇ ಹಂತದಲ್ಲಿ ಮೊಬೈಲ್ ಸಂಖ್ಯೆ ಬದಲಾವಣೆಗೆ ಅವಕಾಶವಿರುವುದಿಲ್ಲ
- - ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ನಮೂದಿಸುವ ಜಾತಿ, ಜಾತಿ ಆದಾಯ ಪ್ರಮಾಣ ಪತ್ರ ಮತ್ತು3 371(ಜೆ) ಆರ್‌ಡಿ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳ ಮೀಸಲಾತಿ ನೀಡಲಾಗುತ್ತದೆ
- - ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗೆ ನೀಡುವ ಸ್ಯಾಟ್ಸ್ ಸಂಖ್ಯೆ ಆಧಾರದಲ್ಲಿ ವ್ಯಾಸಂಗದ ವಿವರಗಳನ್ನು ವೆಬ್‌ಸರ್ವೀಸ್ ಮೂಲಕ ಪಡೆಯಲಾಗುವುದು. ನಂತರ ಅಭ್ಯರ್ಥಿಗಳಿಗೆ ಕ್ಲೈಮ್ಸ್ ಸರ್ಟಿಫಿಕೆಟ್ ಡೌನ್‌ಲೋಡ್‌ಗೆ ಅವಕಾಶ ನೀಡಲಾಗುವುದು.
- - ಕ್ಲೈಮ್ಸ್ ಸರ್ಟಿಫಿಕೆಟ್ ಡೌನ್‌ಲೋಡ್ ಯಶಸ್ವಿಯಾಗಿ ನಡೆದರೆ ಅಂತಹ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಕಾಲೇಜುಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಸಿಇಟಿ ಪರೀಕ್ಷೆ ನಂತರ ನೇರವಾಗಿ ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
- - ಒಂದು ವೇಳೆ ಡೌನ್‌ಲೋಡ್ ಆಗದಿದ್ದರೆ, ಆಯಾ ಕಾಲೇಜಿನಲ್ಲಿ ಪ್ರಾಂಶುಪಾಲರ ಮೂಲಕ ಕ್ಲೈಮ್ಸ್ ಸರ್ಟಿಫಿಕೇಟ್ ಸಲ್ಲಿಸಬೇಕು.
- - ಪ್ರಾಧಿಕಾರವು ರಾಜ್ಯದಲ್ಲಿರುವ ಎಲ್ಲ ಪಿಯು ಕಾಲೇಜುಗಳಿಗೆ ಲಾಗಿನ್ ನೀಡಿ ಅಭ್ಯರ್ಥಿಗಳಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಕಾಲೇಜಿನವರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳನ್ನು ಪಡೆದು, ಪರಿಶೀಲನೆ ಮಾಡಲು ತತ್ರಾಂಶವನ್ನು ಸಿದ್ದಪಡಿಸಿದೆ.
- - ಅಭ್ಯರ್ಥಿಗಳು ಬಿಇಒ ಕಚೇರಿಗೆ ಪರಿಶೀಲನೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
- - ವಿಶೇಷ ಕ್ಯಾಟಗರಿಗಳಾದ ಎನ್‌ಸಿಸಿ, ಕ್ರೀಡೆ, ಸೈನಿಕ, ಮಾಜಿ ಸೈನಿಕ, ಸಿಎಪಿಎ್, ಮಾಜಿ ಸಿಎಪಿಎ್, ಸ್ಕೌಟ್ಸ್ ಆೃಂಡ್ ಗೈಡ್ಸ್, ಆಂಗ್ಲೋ ಇಂಡಿಯನ್ಸ್ ಕೋಟದ ಅಡಿಯಲ್ಲಿ ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಕೆಇಎನಲ್ಲಿ ಖುದ್ದಾಗಿ ಸಲ್ಲಿಸಬೇಕು
- - ಈ ಬಾರಿ ವಿದ್ಯಾರ್ಥಿಗಳು ಯಾವುದೇ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪಲೋಡ್ ಮಾಡುವ ಅಗತ್ಯವಿರುವುದಿಲ್ಲ.
- ಪರೀಕ್ಷೆಗಳ ವೇಳಾಪಟ್ಟಿ
ಪರೀಕ್ಷೆ ಪರೀಕ್ಷೆ ದಿನಾಂಕ ಅರ್ಜಿ ಸಲ್ಲಿಕೆ ಆರಂಭ
ಸಿಇಟಿ ಏ.16,17,18 ಜ.23ರಿಂದ ೆ.21
ಡಿಸಿಇಟಿ ಮೇ 31 ಏ.24ರಿಂದ ಮೇ10
ಪಿಜಿಸಿಇಟಿ (ಎಂಇ, ಎಂಟೆಕ್, ಎಂ.ಆರ್ಕಿಟೆಕ್ಚರ್) ಮೇ 31 ಏ.24ರಿಂದ ಮೇ 10
ಎಂಸಿಎ, ಎಂಬಿಎ ಜೂ.22 ಏ.24ರಿಂದ ಜೂ.10
ಎಂ.ಫಾರ್ಮ, ಫಾರ್ಮಾ-ಡಿ ಜೂ.22 ಏ.24ರಿಂದ ಜೂ.10