ಬೆಂಗಳೂರು: ಕನ್ನಡದ ಖ್ಯಾತ ಲೇಖಕಿ ದಿವಂಗತ ಡಾ. ಎಚ್. ಗಿರಿಜಮ್ಮ ಅವರ ನೆನಪಿನಲ್ಲಿ ಪ್ರತಿವರ್ಷ ಮಹಿಳಾ ವೈದ್ಯರಿಗೆ ನೀಡುವ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
2022 ರಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯ, ಕಥಾ ಸಂಕಲನ, ಕಾದಂಬರಿ, ಕವಿತಾ ಸಂಕಲನ, ಪ್ರಬಂಧ, ಪ್ರವಾಸ ಕಥನ ಈ ಯಾವುದೇ ಪ್ರಕಾರದ ತಮ್ಮ ಕೃತಿಗಳ ತಲಾ ಮೂರು ಪ್ರತಿಗಳನ್ನು ವೈದ್ಯ ಲೇಖಕಿಯರು ಆಗಸ್ಟ್ 30 ರೊಳಗೆ ಕಳಿಸಬಹುದು. "ಡಾ. ಎಚ್. ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ"ಯು 25 ಸಾವಿರ ರೂಪಾಯಿ ನಗದು ಮತ್ತು ಸ್ಮರಣ ಫಲಕವನ್ನು ಒಳಗೊಂಡಿದೆ.
ಕೃತಿಗಳನ್ನು ಕಳಿಸಬೇಕಾದ ವಿಳಾಸ: ಡಾ. ಎಚ್. ಗಿರಿಜಮ್ಮ ಸ್ನೇಹ ಬಳಗ, ನಂ.222, 2ನೇ ಇ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರ ನಗರ, ಬೆಂಗಳೂರು 560079 (ಮೊ : 9986840477)