ನ್ಯೂಸ್

ನೀವು ಬಿಇ ಪದವೀಧರರೇ? ಪರಿಸರ ಸಚಿವಾಲಯದಲ್ಲಿ ಕನ್ಸಲ್ಟೆಂಟ್ ಆಗಿ...

ನವದೆಹಲಿ : ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ಸಲ್ಟೆಂಟ್- 6, ರಿಸರ್ಚ್ ಅಸೋಸಿಯೇಟ್-4 ಹುದ್ದೆಗಳಿವೆ.

ಬಿಇ, ಬಿಟೆಕ್, ತತ್ಸಮಾನ ಪದವಿ ಪೂರೈಸಿ, ಸಂಬಂಧಿಸಿದ ಕ್ಷೇತ್ರದಲ್ಲಿ ಸೇವಾ ಅನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದು,

ಹುದ್ದೆಗಳಿಗೆ ಕ್ರಮವಾಗಿ 60 ಸಾವಿರ ಹಾಗೂ 40 ಸಾವಿರ ರೂ. ಮಾಸಿಕ ಸಂಬಳವಿರುತ್ತದೆ.

ವಿದ್ಯಾರ್ಹತೆ, ವಯೋಮಿತಿ, ಇತ್ಯಾದಿ ವಿವರಗಳಿಗೆ ಅಧಿಕೃತ ವೆಬ್​ಸೈಟ್ http://moef.gov.in/ ಅಥವಾ https://bit.ly/2ZiQRsl ನೋಡಬಹುದು.