Award ceremony, official ceremony tomorrow 
ನ್ಯೂಸ್

ಕೃಷಿ ಮಾಧ್ಯಮ ಮಿತ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ‘ಕೃಷಿ ಮಾಧ್ಯಮ ಮಿತ್ರ ಪ್ರಶಸ್ತಿ-2025’ ಅರ್ಜಿ ಆಹ್ವಾನಿಸಲಾಗಿದೆ.

ಪತ್ರಕರ್ತರು, ವರದಿಗಾರರು, ವಿಸ್ತರಣಾ ಕಾರ್ಯರ್ಕ್ತರು, ವಿಜ್ಞಾನಿಗಳು, ಅಧಿಕಾರಿಗಳು ಪ್ರಶಶ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಹಳೆಯ ವಿದ್ಯಾರ್ಥಿಗಳ ಸಂಘ, ಬೆಂಗಲೂರು ಕೃಷಿ ವಿಶ್ವವಿದ್ಯಾಲಯ, ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ, ಬೆಂಗಳೂರು - 24 ಈ ವಿಳಾಸಕ್ಕೆ ಸೆ.23ರೊಳಗೆ ಕಳುಹಿಸಿಕೊಡಬೇಕು.

ಹೆಚ್ಚಿನ ಮಾಹಿತಿಗೆ ದೂ: 080 - 23410754 ಸಂಪರ್ಕಿಸಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.