Cat Kumar: ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ವಿವಾದದ ಮಧ್ಯೆ ಇಲ್ಲಿನ ರೋಹ್ತಾಸ್‌ನಲ್ಲಿ ಬೆಕ್ಕಿನ ಹೆಸರಿನಲ್ಲಿ ವಸತಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು, ನಾಯಿ ಹೆಸರಿನಲ್ಲಿ ವಾಸಸ್ಥಳ ಪ್ರಮಾಣ ಪತ್ರ ವಿತರಣೆಯಾಗಿತ್ತು. ಬಳಿಕ ಮತ್ತೊಂದು ನಾಯಿ ಹೆಸರಿಲ್ಲಿ ವಾಸಸ್ಥಳ ನೀಡುವಂತೆ ಅರ್ಜಿ ಸಲ್ಲಿಸಿದ ಪ್ರಕರಣಳು ಬೆಳಕಿಗೆ ಬಂದಿದ್ದವು. ಇದೀಗ ಮತ್ತೊಂದು ಪ್ರಕರಣದಲ್ಲಿ ಬೆಕ್ಕಿನ ಹೆಸರಿನಲ್ಲಿ ವಸತಿ ಪ್ರಮಾಣಪತ್ರ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ:ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ; ಪೊಲೀಸರ ಬ್ಯಾರಿಕೇಡ್ ಹಾರಿದ ‘ಅಖಿಲೇಶ್ ಯಾದವ್’ | Opposition March
ಅರ್ಜಿದಾರರ ಹೆಸರು ಕ್ಯಾಟ್ ಕುಮಾರ್, ತಂದೆ ಕ್ಯಾಟಿ ಬಾಸ್ ಮತ್ತು ತಾಯಿ ಕ್ಯಾಟಿಯಾ ದೇವಿ ಎಂದು ಉಲ್ಲೇಖಿಸಲಾಗಿದೆ.
ಅರ್ಜಿಯನ್ನು ಪತ್ತೆಹಚ್ಚಿದ ನಂತರ, ರೋಹ್ತಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಿತಾ ಸಿಂಗ್, ನಸ್ರಿಗಂಜ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕಂದಾಯ ಅಧಿಕಾರಿ ಕೌಶಲ್ ಪಟೇಲ್ ಅವರಿಗೆ ಸೂಚಿಸಿದ್ದು ಇದೀಗ ತನಿಖೆ ನಡೆಯುತ್ತಿದೆ.
ಕೌಶಲ್ ಪಟೇಲ್ ಎಂಬ ವ್ಯಕ್ತಿ ದೂರು ದಾಖಲಿಸಿದ್ದು, ತನ್ನ ಅರ್ಜಿಯ ಬಗ್ಗೆ ವಿಚಾರಿಸಲು ಆರ್‌ಟಿಪಿಎಸ್ ಕೌಂಟರ್‌ಗೆ ಭೇಟಿ ನೀಡಿದಾಗ ಅದೇ ವಿಳಾಸದಿಂದ "ಕ್ಯಾಟ್ ಕುಮಾರ್" ಎಂಬ ಹೆಸರಿನಲ್ಲಿ ಆನ್‌ಲೈನ್ ಅರ್ಜಿಯನ್ನು (ಸಂಖ್ಯೆ 6205631700) ಸಲ್ಲಿಸಲಾಗಿದೆ. ಆದರೆ, ಪಾಲಕರ ವಿವರಗಳು ತಪ್ಪಾಗಿವೆ ಎಂದು ತಿಳಿದುಬಂದಿದೆ.
ಈ ಅರ್ಜಿಯು ರೋಹ್ತಾಸ್ ಜಿಲ್ಲೆಯ ಮೋಕರ್ ಪೊಲೀಸ್ ಠಾಣೆಯ ಅಹಿಬರನ್ ಗ್ರಾಮದಲ್ಲಿ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರರ ಫೋಟೋ ತನ್ನದೇ ಎಂದು ದೂರುದಾರರು ಹೇಳಿಕೊಂಡಿದ್ದಾರೆ, ಆದರೆ ಹೆಸರು ಮತ್ತು ತಂದೆಯ ಹೆಸರು ತಪ್ಪಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನ್ಯಾಯದ ಲಾಭ ಪಡೆಯಲು ಆ ವ್ಯಕ್ತಿಯು ಉದ್ದೇಶಪೂರ್ವಕವಾಗಿ ತನ್ನ ಫೋಟೋವನ್ನು ಸುಳ್ಳು ವಿವರಗಳೊಂದಿಗೆ ಬಳಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾನೆ.(ಏಜೆನ್ಸೀಸ್)