ನ್ಯೂಸ್

10 ಕೋಟಿ ರೂ. ಬೆಲೆಬಾಳುತ್ತದೆ ಒಂದು 'ಸೇಬು'! ಆದರೆ ಇದನ್ನ ತಿನ್ನೋಕೆ ಆಗಲ್ಲ.. Apple

ಮುಂಬೈ: ಮಾರುಕಟ್ಟೆಯಲ್ಲಿ ಒಂದು ಕೆಜಿ ಸೇಬುಗೆ ( Apple) 100 ರೂಪಾಯಿಯಿಂದ 200 ರೂಪಾಯಿವರೆಗೆ ಇರಬಹುದು. ಆದರೆ ಇಲ್ಲಿ ಮಾನ್ಯವಾಗಿ ಕಾಣುವ ಸೇಬು ಕೋಟ್ಯಂತರ ರೂಪಾಯಿ ಬೆಲೆಬಾಳುತ್ತದೆ ಎಂದು ನೀವು ಎಂದಾದರೂ ಊಹಿಸಿದ್ದೀರಾ? ಈ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಮುಂಬೈ ಮೂಲದ ಪ್ರಸಿದ್ಧ ಆಭರಣ ವಿನ್ಯಾಸಕ, "ಗೋಲ್ಡ್ ಮ್ಯಾನ್" ಎಂದು ಪ್ರೀತಿಯಿಂದ ಕರೆಯಲ್ಪಡುವ ರೋಹಿತ್ ಪಿಸಲ್ ಅವರು 10 ಕೋಟಿ ರೂಪಾಯಿ ಮೌಲ್ಯದ ವಜ್ರ ಮತ್ತು ಚಿನ್ನದಿಂದ ಮಾಡಿದ ಸೇಬನ್ನು ರಚಿಸಿದ್ದಾರೆ, ಇದು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ.

ಈ ವಿಶೇಷ ಪದಾರ್ಥಗಳಿಂದ ತಯಾರಿಸಿದ 10 ಕೋಟಿ ರೂ. ಬೆಲೆಬಾಳುವ 'ಸೇಬು

18 ಕ್ಯಾರೆಟ್ ಚಿನ್ನ ಮತ್ತು 9 ಕ್ಯಾರೆಟ್ 36 ಕ್ಯಾರೆಟ್ ವಜ್ರಗಳನ್ನು ಬಳಸಿ ರಚಿಸಿದ್ದಾರೆ. ಈ ಚಿನ್ನದ ಸೇಬನ್ನು ಸುಮಾರು 1,396 ಸಣ್ಣ ವಜ್ರಗಳಿಂದ ಹೊದಿಸಲಾಗಿದೆ, ಸರಿಸುಮಾರು 29.8 ಗ್ರಾಂ ತೂಕವಿರುವ ಇದರ ಸಂಕೀರ್ಣ ಕರಕುಶಲತೆಯು ಅತ್ಯಂತ ಸೂಕ್ಷ್ಮವಾಗಿದೆ. ಇದು ನಿಜವಾದ ಸೇಬನ್ನು ಹೋಲುತ್ತದೆ.

ರೋಹಿತ್ ಪಿಸಾಲ್ ಈ ಸೇಬನ್ನು ಕೇವಲ ಆಭರಣವಾಗಿ ಅಲ್ಲ, ಬದಲಾಗಿ ಭಾರತೀಯ ಕಲೆ ಮತ್ತು ಹೆಮ್ಮೆಯನ್ನು ಜಗತ್ತಿಗೆ ಪ್ರದರ್ಶಿಸಲು ರಚಿಸಿದ್ದೇನೆ ಎಂದು ಹೇಳುತ್ತಾರೆ. ಭಾರತದ ಸಾಂಪ್ರದಾಯಿಕ ಆಭರಣ ಕಲೆಯನ್ನು ಆಧುನೀಕರಿಸುವುದು ಮತ್ತು ಅದನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವುದು ಅವರ ದೃಷ್ಟಿಕೋನ. ಅವರ ಚಿನ್ನದ ಸೇಬು ಈ ದೃಷ್ಟಿಕೋನದ ಸಂಕೇತವಾಗಿದೆ. ಈ ವಿಶಿಷ್ಟ ಕಲಾಕೃತಿಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಸಲಾಗಿದೆ. ವರ್ಲ್ಡ್ ಇಂಟರ್ನ್ಯಾಷನಲ್ ಜೆಮಲಾಜಿಕಲ್ ಇನ್ಸ್ಟಿಟ್ಯೂಟ್ (WIGI) ಪ್ರಮಾಣೀಕರಿಸಿದೆ.

ಈ ಅಮೂಲ್ಯವಾದ ಚಿನ್ನದ ಸೇಬನ್ನು ಥೈಲ್ಯಾಂಡ್‌ನ ರಾಯಲ್ ಪ್ಯಾಲೇಸ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ವಿದೇಶಿ ಸಂಗ್ರಾಹಕರು ಮತ್ತು ಕಲಾ ಪ್ರೇಮಿಗಳು ಇದರ ಸೌಂದರ್ಯವನ್ನು ಮೆಚ್ಚುತ್ತಿದ್ದಾರೆ. ಅನೇಕರು ಇದನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅವರು ಲಕ್ಷಾಂತರ ರೂಪಾಯಿಗಳನ್ನು ಪಾವತಿಸಲು ಮುಂದೆ ಬಂದಿದ್ದಾರೆ.