ಆಶ್ರಯ ಬಡಾವಣೆಯ ಖಾತೆ ಬದಲಿಸಿಕೊಡುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ನೇತೃತ್ವದಲ್ಲಿ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಂ.ಎಸ್.ಶಿವಕುಮಾರ್, ಎಚ್.ಪಾಲಾಕ್ಷಿ, ನಾಗರಾಜ್ ಕಂಕಾರಿ, ಬಿ.ಎ.ರಮೇಶ್ ಹೆಗೆಡೆ ಇದ್ದರು. 
ನ್ಯೂಸ್

ಆಶ್ರಯ ಬಡಾವಣೆ ಖಾತೆ ಬದಲಿಸಿಕೊಡುವಂತೆ ಆಯುಕ್ತೆಗೆ ಮನವಿ

ಶಿವಮೊಗ್ಗ: ಸ್ಥಗಿತವಾಗಿರುವ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಆಶ್ರಯ ನಿವಾಸಿಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಖಾತೆಗಳನ್ನು ಮತ್ತೆ ದಾಖಲಿಸಿಕೊಡಬೇಕೆಂದು ಆಗ್ರಹಿಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ನೇತೃತ್ವದಲ್ಲಿ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಆಶ್ರಯ ಯೋಜನೆಯಡಿ ಸಾವಿರಾರು ಬಡ ಕುಟುಂಬಗಳಿಗೆ ಉಚಿತವಾಗಿ ನಿವೇಶನ ಮಂಜೂರು ಮಾಡಲಾಗಿತ್ತು. ಈ ನಿವೇಶನಗಳಲ್ಲಿ ಅನೇಕರು ಆರ್ಥಿಕ ಸಹಾಯ ಪಡೆದುಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಇವರ ಪೌತಿ ಖಾತೆ ಹಾಗೂ ಇನ್ನಿತರ ಕಾನೂನು ರೀತಿಯ ಆಸ್ತಿ ವರ್ಗಾವಣೆಯನ್ನು ಪಾಲಿಕೆ ಸ್ಥಗಿತಗೊಳಿಸಿದೆ. ಇದರಿಂದ ನಿವೇಶನ ಮಾಲೀಕರಿಗೆ ಸ್ವತ್ತಿನ ಹಕ್ಕುದಾರಿಕೆಗೆ ಸಂಬಂಧಿಸಿ ತೊಂದರೆಯುಂಟಾಗಿದೆ ಎಂದು ದೂರಿದರು.
ಆಶ್ರಯ ಬಡಾವಣೆಯ ಸ್ವತ್ತಿನ ಖಾತೆಗೆ ಸ್ಥಗಿತಗೊಳಿಸಿರುವ ಕ್ರಮವನ್ನು ಹಿಂಪಡೆದು ನಿಯಮಾನುಸಾರ ಖಾತೆಯ ವರ್ಗಾವಣೆ ಮತ್ತು ಖಾತೆ ದಾಖಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಪ್ರಮುಖರಾದ ಎಂ.ಎಸ್.ಶಿವಕುಮಾರ್, ಎಚ್.ಪಾಲಾಕ್ಷಿ, ನಾಗರಾಜ್ ಕಂಕಾರಿ, ಬಿ.ಎ.ರಮೇಶ್ ಹೆಗೆಡೆ, ಚೇತನ್, ರಾಮು ಮತ್ತಿತರರು ಉಪಸ್ಥಿತರಿದ್ದರು.