ರಸ್ತೆ ಬದಿಯಲ್ಲಿ ತರಕಾರಿ ಅಂಗಡಿಯನ್ನು ಅನಧಿಕೃತವಾಗಿ ತೆರೆದು ನಡೆಸುತ್ತಿರುವುದು. 
ನ್ಯೂಸ್

ಅನಧಿಕೃತ ತರಕಾರಿ ಅಂಗಡಿಗಳ ತೆರವಿಗೆ ಮನವಿ

ಶಿವಶಂಕರ್ ಎಂ. ಹೆಬ್ಬಳ್ಳ

ಸುಂಟಿಕೊಪ್ಪ: ಮಾದಾಪುರ ಪಟ್ಟಣದ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ತರಕಾರಿ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತರಕಾರಿ ಅಂಗಡಿ ಮಳಿಗೆ ಹರಾಜು ಪಡೆದ ವ್ಯಾಪಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೋಮವಾರ ದೂರು ನೀಡಿದರು. ಮಾರುಕಟ್ಟೆ ಆವರಣದಲ್ಲಿ ಮಾದಾಪುರ ಗ್ರಾಮ ಪಂಚಾಯಿತಿಯಿಂದ ಅಧಿಕೃತವಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಂಗಡಿ ಪಡೆದು ತರಕಾರಿ ವ್ಯಾಪಾರ ನಡೆಸಲಾಗುತ್ತಿದೆ. ಆದರೆ ಮಾರುಕಟ್ಟೆ ರಸ್ತೆ ಬದಿಯಲ್ಲಿ ಪ್ರತಿದಿನ ತರಕಾರಿ ಅಂಗಡಿಯನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ಮಾಡುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಂಡು ಅಂಗಡಿ ತೆರವುಗೊಳಿಸಬೇಕೆಂದು ವ್ಯಾಪಾರಿ ಸುಧೀಶ ಒತ್ತಾಯಿಸಿದರು.